ಪಂಜಾಬ್: 21 ವರ್ಷದ ಯುವತಿಯನ್ನು ಕಾರಿನಿಂದ ಎಳೆದು 10 ಪುರುಷರಿಂದ ಅತ್ಯಾಚಾರ!

ಸ್ನೇಹಿತನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ 21 ವರ್ಷದ ಯುವತಿಯನ್ನು 10 ಪುರುಷರ ಗುಂಪೊಂದು ಕಾರಿನಿಂದ ಎಳೆದು ಅತ್ಯಾಚಾರವೆಸಗಿರುವ ಘಟನೆ ಪಂಜಾಬ್ ನ ಲೂಧಿಯಾನದ ಸಿದ್ವನ್ ಕಾಲುವೆ ಬಳಿ ನಡೆದಿದೆ.

Published: 11th February 2019 12:00 PM  |   Last Updated: 11th February 2019 11:04 AM   |  A+A-


21-year-old dragged out of car, raped by 10 men in Punjab

ಪಂಜಾಬ್: 21 ವರ್ಷದ ಯುವತಿಯನ್ನು ಕಾರಿನಿಂದ ಎಳೆದು 10 ಪುರುಷರಿಂದ ಅತ್ಯಾಚಾರ!

Posted By : SBV SBV
Source : Online Desk
ಲೂಧಿಯಾನ: ಸ್ನೇಹಿತನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ 21 ವರ್ಷದ ಯುವತಿಯನ್ನು 10 ಪುರುಷರ ಗುಂಪೊಂದು ಕಾರಿನಿಂದ ಎಳೆದು ಅತ್ಯಾಚಾರವೆಸಗಿರುವ ಘಟನೆ ಪಂಜಾಬ್ ನ ಲೂಧಿಯಾನದ ಸಿದ್ವನ್ ಕಾಲುವೆ ಬಳಿ ನಡೆದಿದೆ.

ಲೂಧಿಯಾನದಿಂದ ಇಸೆವಾಲ್ ಗ್ರಾಮಕ್ಕೆ ತನ್ನ ಸ್ನೇಹಿತನೊಂದಿಗೆ ತೆರಳುತ್ತಿದ್ದ ಯುವತಿಯಿದ್ದ ಕಾರನ್ನು ದ್ವಿಚಕ್ರವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದ 3 ಜನ ಕಾಮುಕರು ಮಾರ್ಗಮಧ್ಯದಲ್ಲಿ ಕಾರನ್ನು ನಿಲ್ಲಿಸಿದ್ದಾರೆ.  ಕಾರು ನಿಲ್ಲಿಸುತ್ತಿದ್ದಂತೆಯೇ  ಮೊದಲಿಗೆ ಕಲ್ಲು ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿರುವ ಕಿಡಿಗೇಡಿಗಳು ಇಬ್ಬರನ್ನೂ ಕಾಲುವೆಯಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ, ಈ ವೇಳೆ ಮತ್ತೆ 7 ಜನರನ್ನು ಕರೆದಿದ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಎಸ್ ಪಿ ತರುಣ್ ಹೇಳಿದ್ದಾರೆ. 

ಸಂತ್ರಸ್ತೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಘಟನೆಯ ಬಗ್ಗೆ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp