ರಾಮನಾಗಿ ರಾಹುಲ್ ಗಾಂಧಿ ಆಯ್ತು ಇದೀಗ ದುರ್ಗಿಯಾದ ಪ್ರಿಯಾಂಕಾ ವಾದ್ರಾ!

ರಾಮನಾಗಿ ರಾಹುಲ್ ಗಾಂಧಿ ರಾವಣನಾಗಿ ಮೋದಿ ಅವರ ಭಾವಚಿತ್ರಗಳಿರುವ ಪೋಸ್ಟರ್ ಗಳು ವೈರಲ್ ಆದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರನ್ನು ದುರ್ಗಿಯಾಗಿ ಬಿಂಬಿಸಿದ್ದಾರೆ.

Published: 11th February 2019 12:00 PM  |   Last Updated: 11th February 2019 11:55 AM   |  A+A-


After Rahul Gandhi as Rama, Now, Priyanka Vadra as Durga

ಸಂಗ್ರಹ ಚಿತ್ರ

Posted By : SVN SVN
Source : ANI
ಲಖನೌ: ರಾಮನಾಗಿ ರಾಹುಲ್ ಗಾಂಧಿ ರಾವಣನಾಗಿ ಮೋದಿ ಅವರ ಭಾವಚಿತ್ರಗಳಿರುವ ಪೋಸ್ಟರ್ ಗಳು ವೈರಲ್ ಆದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರನ್ನು ದುರ್ಗಿಯಾಗಿ ಬಿಂಬಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ವಾದ್ರಾಗೆ ಭರ್ಜರಿ ಸ್ವಾಗತವೇ ದೊರೆಯುತ್ತಿದ್ದು, ಪ್ರಿಯಾಂಕಾ ಆಗಮನದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುರುಪು ಮೂಡಿದೆ. 

ಅಂತೆಯೇ ಉತ್ತರ ಪ್ರದೇಶದಲ್ಲಿ ಪೋಸ್ಟರ್ ರಾಜಕೀಯ ಕೂಡ ಹೊಸ ಟ್ರೆಂಡ್ ಆಗಿದ್ದು, ಈ ಹಿಂದೆ ರಾಹುಲ್ ಗಾಂಧಿ ಅವರನ್ನು ರಾಮನಾಗಿ ಬಿಂಬಿಸಿ ಮೋದಿ ಅವರನ್ನು ದಶಕಂಠ ರಾವಣನಾಗಿ ಪೋಸ್ಟರ್ ನಲ್ಲಿ ಚಿತ್ರಿಸಲಾಗಿತ್ತು. ಇದೀಗ ಅದರ ಮುಂದುವರೆದ ಭಾಗವೆಂಬತೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಪ್ರಿಯಾಂಕಾ ವಾದ್ರಾ ಅವರನ್ನು ಇದೀಗ ದುರ್ಗಿಯಂತೆ ಚಿತ್ರಿಸಲಾಗಿದೆ. ಲಖನೌನಲ್ಲಿರುನ ಕಾಂಗ್ರೆಸ್ ಕಚೇರಿಯಲ್ಲಿ ಇಂತಹ ಪೋಸ್ಟರ್ ಅನ್ನು ಹಾಕಲಾಗಿದೆ.

ಪೋಸ್ಚರ್ ನಲ್ಲಿ ಪ್ರಿಯಾಂಕ ಮಾತ್ರವಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜ್ಯೋತಿರಾಧಿತ್ಯ ಸಿಂಧ್ಯಾ ಸೇರಿದಂತೆ ಪ್ರಮುಖ ನಾಯಕರ ಚಿತ್ರಗಳನ್ನು ಪೋಸ್ಟರ್ ನಲ್ಲಿ ಹಾಕಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp