ಆಂಧ್ರಕ್ಕೆ ವಿಶೇಷ ಸ್ಥಾನಮಾನ: ದೆಹಲಿಯಲ್ಲಿ ಸಿಎಂ ನಾಯ್ಡು ಉಪವಾಸ ಸತ್ಯಾಗ್ರಹ

ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಸಿಎಂ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

Published: 11th February 2019 12:00 PM  |   Last Updated: 11th February 2019 11:53 AM   |  A+A-


Andhra CM Chandrababu Naidu begins fast to demand special status for AP

ಸಿಎಂ ನಾಯ್ಡು ಉಪವಾಸ

Posted By : SVN SVN
Source : ANI
ನವದೆಹಲಿ: ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಸಿಎಂ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆ 2014ರ ಅನ್ವಯ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಚಂದ್ರಬಾಬು ನಾಯ್ಡು ನೇತೃತ್ಯದಲ್ಲಿ ದೆಹಲಿಯಲ್ಲಿ ಇಂದು ಟಿಡಿಪಿ ಪಕ್ಷ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ. 

ಸತ್ಯಾಗ್ರಹಕ್ಕೂ ಮೊದಲು ಸಿಎಂ ನಾಯ್ಡು ಮಹಾತ್ಮ ಗಾಂಧಿ ಸಮಾಧಿ ರಾಜ್ ಘಾಟ್ ಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಬಳಿಕ ಆಂಧ್ರ ಪ್ರದೇಶ ಭವನಕ್ಕೆ ತೆರಳಿ ತಮ್ಮ ಧರ್ಮ ಪೋರಾಟ ದೀಕ್ಷಾ ಸತ್ಯಾಗ್ರಹವನ್ನು ಆರಂಭಿಸಿದರು. ಇನ್ನು ನಾಯ್ಡು ಅವರ ಪ್ರತಿಭಟನೆಗೆ ಇಂದು ವಿಪಕ್ಷಗಳ ಪ್ರಮುಖ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಇಂದಿನ ಸತ್ಯಾಗ್ರಹದಲ್ಲಿ ಆಂಧ್ರ ಪ್ರದೇಶದ ಸಚಿವರು, ಟಿಡಿಪಿ ಶಾಸಕರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಅಂತೆಯೇ ಇಂದಿನ ಧರಣಿ ಬಳಿಕ ನಾಳೆ ರಾಷ್ಟ್ರಪತಿ ಕೋವಿಂದ್ ರನ್ನು ಭೇಟಿ ಮಾಡಲಿರುವ ಸಿಎಂ ನಾಯ್ಡು ಮನವಿ ಪತ್ರ ಸಲ್ಲಿಕೆ ಮಾಡಲಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp