ಸಂಸದೀಯ ಸಮಿತಿ ಮುಂದೆ ಹಾಜರಾಗಲು ಟ್ವಿಟರ್ ಸಿಇಒಗೆ ಫೆಬ್ರವರಿ 25ರವರೆಗೂ ಗಡವು

ಫೆಬ್ರವರಿ 25ರೊಳಗೆ ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ಸಾಮಾಜಿಕ ಜಾಲತಾಣ ಟ್ವಿಟರ್ ಮುಖ್ಯಸ್ಥ ಹಾಗೂ ಇತರ ಅಧಿಕಾರಿಗಳಿಗೆ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಸಮನ್ಸ್ ಜಾರಿ ಮಾಡಿದೆ
ಟ್ವಿಟರ್ ಸಿಇಒ
ಟ್ವಿಟರ್ ಸಿಇಒ

ನವದೆಹಲಿ: ಫೆಬ್ರವರಿ 25ರೊಳಗೆ  ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ಸಾಮಾಜಿಕ ಜಾಲತಾಣ ಟ್ವಿಟರ್  ಮುಖ್ಯಸ್ಥ ಹಾಗೂ ಇತರ ಅಧಿಕಾರಿಗಳಿಗೆ  ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ  ಸಮನ್ಸ್ ಜಾರಿ ಮಾಡಿದೆ ಎಂದು ಸಮಿತಿ ಮುಖ್ಯಸ್ಥ ಅನುರಾಗ್ ಠಾಕೂರ್ ಹೇಳಿದ್ದಾರೆ.

ಸಂಸದೀಯ ಸಮಿತಿ ಮುಂದೆ  ಹಾಜರಾಗುವವರೆಗೂ ಟ್ವಿಟರ್   ಜಾಗತಿಕ ತಂಡದ ಸಿಇಒ ಅಥವಾ ಯಾವುದೇ ಹಿರಿಯ ಸದಸ್ಯರನ್ನು ಭೇಟಿ ಮಾಡದಂತೆ  ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ್ದು, ಟ್ವೀಟರ್ ಗೆ 15 ದಿನಗಳ ಗಡವು ನೀಡಲಾಗಿದೆ.

ಶನಿವಾರ  ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಮುಂದೆ ಹಾಜರಾಗದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ನೀಡಿತ್ತು. ಆದರೆ. ಶನಿವಾರ ಕೂಡಾ  ಟ್ವೀಟರ್ ಕಂಪನಿಯ ಸಿಇಒ ಹಾಗೂ ಉನ್ನತ ಅಧಿಕಾರಿಗಳು  ಸಂಸದೀಯ ಸಮಿತಿ ಮುಂದೆ ಹಾಜರಾಗಲು ನಿರಾಕರಿಸಿದ್ದರು.  

ಟ್ವಿಟ್ಟರ್  ಬಲ ಪಂಥೀಯರ ಖಾತೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಸದೀಯ ಸಮಿತಿ ಮುಂದೆ ಹಾಜರಾಗಲು ಟ್ವಿಟ್ಟರ್ ಸಿಇಒ ಹಾಗೂ ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಶನಿವಾರ ಬಿಜೆಪಿ ಹೇಳಿಕೆ ನೀಡಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕ ಹಕ್ಕುಗಳ ಚರ್ಚೆಗೆ ಸಂಬಂಧಿಸಿದಂತೆ  ಸಂಸದೀಯ ಸಮಿತಿ ಟ್ವೀಟರ್ ಸಿಇಒ ಹಾಗೂ ಇನ್ನಿತರ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com