ಟಿಕೆಟ್ ರದ್ದತಿ ಶುಲ್ಕ ಪರಿಷ್ಕರಿಸಿದ ಜೆಟ್ ಏರ್ವೇಸ್

ಜೆಟ್ ಏರ್ವೇಸ್ ವಿಮಾನ ಟಿಕೆಟ್ ರದ್ದತಿ ಶುಲ್ಕವನ್ನು ಪರಿಷ್ಕರಿಸಿದ್ದು, ದೇಶೀಯ ವಿಮಾನಗಳಿಗೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ.
ಜೆಟ್ ಏರ್ವೇಸ್
ಜೆಟ್ ಏರ್ವೇಸ್
ಜೆಟ್ ಏರ್ವೇಸ್ ವಿಮಾನ ಟಿಕೆಟ್ ರದ್ದತಿ ಶುಲ್ಕವನ್ನು ಪರಿಷ್ಕರಿಸಿದ್ದು, ದೇಶೀಯ ವಿಮಾನಗಳಿಗೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. 
ಪ್ರಯಾಣಕ್ಕೂ ಎಷ್ಟು ದಿನಗಳ ಮುನ್ನ ರದ್ದತಿ ಮಾಡುತ್ತೀರಿ ಎಂಬುದರ ಆಧಾರದಲ್ಲಿ ರದ್ದತಿ ಶುಲ್ಕ ನಿರ್ಧಾರವಾಗಲಿದೆ. ವಿಮಾನ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಪ್ರಯಾಣಕ್ಕೂ 7 ದಿನದ ಒಳಗಾಗಿ ಪ್ರೀಮಿಯರ್ ಕ್ಲಾಸಿಕ್ ಫೇರ್ ಟಿಕೆಟ್ ರದ್ದತಿಗೆ 2,300-4800 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 
ಇನ್ನು ಎಕಾನಮಿ ವಿಭಾಗದಲ್ಲಿ ವಿವಿಧ ವಿವಿಧ ಶುಲ್ಕ ಆಯ್ಕೆಗಳಿಗೆ ಅನುಗುಣವಾಗಿ ಟಿಕೆಟ್ ರದ್ದತಿ ಶುಲ್ಕ ನಿರ್ಧಾರವಾಗಲಿದೆ. ಪ್ಲೆಕ್ಸ್ ಫೇರ್ ನಲ್ಲಿ ಪ್ರಯಾಣಕ್ಕೂ 7 ದಿನಗಳ ಮುಂಚಿತವಾಗಿ ಟಿಕೆಟ್ ರದ್ದು ಮಾಡಿದರೆ 1,500 ರಿಂದ 2,000 ರೂಪಾಯಿ ಶುಲ್ಕ ಅನ್ವಯವಾಗಲಿದೆ, ಪ್ರಯಾಣಕ್ಕೆ 7 ದಿನಕ್ಕಿಂತ ಕಡಿಮೆ ಅವಧಿ ಇರುವಾಗ ಟಿಕೆಟ್ ರದ್ದು ಮಾಡಿದರೆ 2,300 ರಿಂದ 2,800 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.  
ಸೇವರ್ ಶುಲ್ಕ ವಿಭಾಗದಲ್ಲಿ 7 ದಿನಗಳ ಮುಂಚಿತವಾಗಿ ಟಿಕೆತ್ ರದ್ದು ಮಾಡಿದರೆ 3.000-3.500 ರೂಪಾಯಿ ಹಾಗೂ 7 ದಿನಕ್ಕಿಂತ ಕಡಿಮೆ ಅವಧಿ ಇರುವಾಗ ಟಿಕೆಟ್ ರದ್ದು ಮಾಡಿದರೆ 3,800 ರಿಂದ 4,300 ರೂಗಳವರೆಗೆ ಶುಲ್ಕ ವಿಧಿಸಲಾಗುತ್ತದೆ. ಅವಾರ್ಡ್ ಫ್ಲೈಟ್ ಬುಕ್ಕಿಂಗ್ ಟಿಕೆಟ್ ರದ್ದತಿ ಶುಲ್ಕ ಈ ಹಿಂದಿನಂತೆಯೇ ಇರಲಿದೆ ಎಂದು ವಿಮಾನ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com