ಟ್ವಿಟ್ಟರ್​ ಖಾತೆ ತೆರೆದ ಪ್ರಿಯಾಂಕಾ ಗಾಂಧಿ, ನಿಮಿಷದಲ್ಲೇ ಸಾವಿರಾರು ಫಾಲೋವರ್ಸ್

ಇತ್ತೀಚಿಗಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ...

Published: 11th February 2019 12:00 PM  |   Last Updated: 11th February 2019 04:49 AM   |  A+A-


Priyanka logs on to Twitter, garners massive response

ಪ್ರಿಯಾಂಕಾ ಗಾಂಧಿ

Posted By : LSB LSB
Source : PTI
ನವದೆಹಲಿ: ಇತ್ತೀಚಿಗಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಟ್ವಿಟ್ಟರ್​ ಖಾತೆ ತೆರೆದಿದ್ಧಾರೆ.

ಟ್ವಿಟ್ಟರ್​ ಅಕೌಂಟ್​ ತೆರೆದ ಕೆಲವು ನಿಮಿಷಗಳಲ್ಲೇ ಸಾವಿರಾರು ಫಾಲೋವರ್ಸ್​​ಗಳು ಪ್ರಿಯಾಂಕಾ ಗಾಂಧಿ ಅವರನ್ನು ಫಾಲೋ ಮಾಡಿದ್ದಾರೆ. 

ಪ್ರಿಯಾಂಕಾ ಇದೀಗ ರಾಜಕೀಯ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಲಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಅಖಾಡಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಮೇಲೆ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕಣ್ಣಿಟ್ಟಿವೆ. ರಾಷ್ಟ್ರೀಯ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ (ಉತ್ತರಪ್ರದೇಶ ಪೂರ್ವ) ಜವಾಬ್ದಾರಿ ತೆಗೆದುಕೊಂಡಿರುವ ಪ್ರಿಯಾಂಕಾ ಇಂದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ರೋಡ್ ಶೋ ನಡೆಸುತ್ತಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp