ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ದೆಹಲಿ-ವಾರಾಣಸಿ ಟಿಕೆಟ್ ದರ ಬಹಿರಂಗ

ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಥವಾ ಟ್ರೈನ್‌-18 ನ ದೆಹಲಿ - ವಾರಾಣಸಿ ಎಸಿ ಚೇರ್‌ ಕಾರ್‌ ಟಿಕೆಟ್‌....

Published: 11th February 2019 12:00 PM  |   Last Updated: 11th February 2019 06:13 AM   |  A+A-


Vande Bharat Express' Delhi-Varanasi ticket fare out

ವಂದೇ ಭಾರತ್ ಎಕ್ಸ್ ಪ್ರೆಸ್

Posted By : LSB LSB
Source : PTI
ನವದೆಹಲಿ: ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಥವಾ ಟ್ರೈನ್‌-18 ನ ದೆಹಲಿ - ವಾರಾಣಸಿ ಎಸಿ ಚೇರ್‌ ಕಾರ್‌ ಟಿಕೆಟ್‌ ಹಾಗೂ ಎಕ್ಸಿಕ್ಯುಟಿವ್‌ ಕ್ಲಾಸ್‌ ಟಿಕೆಟ್‌ ದರ ಸೋಮವಾರ ಬಹಿರಂಗವಾಗಿದೆ.

ಎಸಿ ಚೇರ್‌ ಕಾರ್‌ ಟಿಕೆಟ್‌ ದರ 1,850 ರೂ. ಹಾಗೂ ಎಕ್ಸಿಕ್ಯುಟಿವ್‌ ಕ್ಲಾಸ್‌ ಟಿಕೆಟ್‌ ದರ 3,520 ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶುಲ್ಕದಲ್ಲಿ ಕ್ಯಾಟರಿಂಗ್‌ ಸೇವಾ ಶುಲ್ಕ ಸಹ ಸೇರಿದೆ. 

ರಿಟರ್ನ್ ಟಿಕೆಟ್ ದರ ಎಸಿ ಚೇರ್‌ ಕಾರ್‌ ಗೆ 1,795 ರೂ. ಮತ್ತು ಎಕ್ಸಿಕ್ಯುಟಿವ್‌ ಕಾರ್‌ ದರವು 3,470 ರೂ. ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸದ್ಯ ದೆಹಲಿ - ವಾರಾಣಸಿ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ ರೈಲಿನ ಶುಲ್ಕಕ್ಕಿಂತ ಟ್ರೈನ್‌ 18 ಎಕ್ಸಿಕ್ಯುಟಿವ್‌ ಕ್ಲಾಸ್‌  ಶುಲ್ಕವು 1.4 ಪಟ್ಟು  ಮತ್ತು ಚೇರ್‌ ಕಾರ್‌ ದರವು 1.5 ಪಟ್ಟು ಅಧಿಕವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15ರಂದು ದೇಶಿ ನಿರ್ಮಿತ ಈ ಸೆಮಿ ಹೈ ಸ್ಪೀಡ್‌ ಟ್ರೈನ್‌ 18 ಗೆ ಚಾಲನೆ ನೀಡಲಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp