ದೆಹಲಿಯ ಕರೋಲ್ ಬಾಗ್ ಹೋಟೆಲ್ ನಲ್ಲಿ ಅಗ್ನಿ ಅವಘಡ: 9 ಮಂದಿ ಸಜೀವ ದಹನ

ಕರೋಲ್​ ಭಾಗ್​ನಲ್ಲಿರುವ ಹೋಟೆಲ್​ ಅರ್ಪಿತ್​ ಪ್ಯಾಲೇಸ್​ನಲ್ಲಿ ಬೆಳ್ಳಬೆಳಗ್ಗೆ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ 9ಮಂದಿ ಸಜೀವದಹನವಾಗಿದ್ದಾರೆ, ಅಗ್ನಿಯ ಕೆನ್ನಾಲಗೆಯು ಹೋಟೆಲ್​ನ 40 ಕೊಠಡಿಗಳಿಗೂ ವ್ಯಾಪಿಸಿರುವ ಕಾರಣ ಸಾವು ನೋವು ಹೆಚ್ಚಾಗಿದೆ ಎಂದು ತಿಳಿದುಬಂದಿದೆ...

Published: 12th February 2019 12:00 PM  |   Last Updated: 12th February 2019 08:36 AM   |  A+A-


Hotel Arpit Palace

ಅರ್ಪಿತ್​ ಪ್ಯಾಲೇಸ್

Posted By : SD SD
Source : ANI
ದೆಹಲಿ:  ಕರೋಲ್​ ಭಾಗ್​ನಲ್ಲಿರುವ ಹೋಟೆಲ್​ ಅರ್ಪಿತ್​ ಪ್ಯಾಲೇಸ್​ನಲ್ಲಿ ಬೆಳ್ಳಬೆಳಗ್ಗೆ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ  9ಮಂದಿ ಸಜೀವದಹನವಾಗಿದ್ದಾರೆ

ಹೋಟೆಲ್​ನಲ್ಲಿ ಕೇರಳದ 10 ಜನರ ಕುಟುಂಬ ಕೂಡ ಇಲ್ಲಿ ವಾಸ್ತವ್ಯ ಹೂಡಿತ್ತು. ಇವರಲ್ಲಿ ಒಬ್ಬರು ಮಹಿಳೆ ಹಾಗೂ ಮಗು  ಸೇರಿ 9 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಗ್ನಿಯ ಕೆನ್ನಾಲಗೆಯು ಹೋಟೆಲ್​ನ 40 ಕೊಠಡಿಗಳಿಗೂ ವ್ಯಾಪಿಸಿರುವ ಕಾರಣ ಸಾವು ನೋವು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಅಗ್ನಿ ಅವಘಡದ  ಸುದ್ದಿ ಕೇಳಿ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. 
ಸದ್ಯ ಸ್ಥಳದಲ್ಲಿ 26 ಅಗ್ನಿಶಾಮಕ ಪಡೆ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. 

ಈಗಾಗಲೆ ಐವರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮೂವರು ಬೆಂಕಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಮೂಲಗಳು ತಿಳಿಸಿದಂತೆ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಳಗ್ಗೆ 4:30ರ ಸುಮಾರಿಗೆ ಹೋಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp