ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬ ಟಿಎಂಸಿ ನಾಯಕ ನಿಗೂಢ ಸಾವು!

ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆಯಾಗಿ ಎರಡು ದಿನಗಳ ತರುವಾಯ ಟಿಎಂಸಿ ಪಕ್ಷದ ಇನ್ನೋರ್ವ ನಾಯಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬ ಟಿಎಂಸಿ ನಾಯಕ ನಿಗೂಢ ಸಾವು!
ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬ ಟಿಎಂಸಿ ನಾಯಕ ನಿಗೂಢ ಸಾವು!
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆಯಾಗಿ ಎರಡು ದಿನಗಳ ತರುವಾಯ ಟಿಎಂಸಿ ಪಕ್ಷದ ಇನ್ನೋರ್ವ ನಾಯಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಕಾಂತಿದಲ್ಲಿ ನಡೆದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರ್ಯಾಲಿಯಲ್ಲಿ ಭಾಗವಹಿಸಿದ್ದ ರಿತೇಶ್ ರಾಯ್ ಸೋಮವಾರ ಬೆಳಿಗ್ಗೆ ಹೂಗ್ಲಿ ಜಿಲ್ಲೆ ಯದಾದ್ ಪುರದಲ್ಲಿ ಮೃತಪಟ್ಟಿದ್ದಾರೆ ಪುರ್ಬ ಮೇಧಿನಿಪುರ ಜಿಲ್ಲೆ  ಕಾಂತಿನಲ್ಲಿರುವ ಮೂರು ಗ್ರಾಮ ಪಂಚಾಯತ್ ಸಮಿತಿಗಳ ಟಿಎಂಸಿ ಅಧ್ಯಕ್ಷರಾಗಿದ್ದ ರಿತೇಶ್ ಸಾರಿಗೆ ಸಚಿವ ಮತ್ತು ಪಕ್ಷದ ಬಲಿಷ್ಠ ನಾಯಕ ಸುವೇಂಧು ಅಧಿಕಾರಿ ಆಪ್ತರಾಗಿದ್ದರು. ರಿತೇಶ್  ಫೆಬ್ರವರಿ 7ರಿಂದ ನಾಪತ್ತೆಯಾಗಿದ್ದರು.
ಮೃತ ರಿತೇಶ್ ಕುತ್ತಿಗೆ ಸುತ್ತ ಒಂದು ಆಳವಾದ ಕಪ್ಪು ಗುರುತು ಕಂಡುಬಂದಿದ್ದು ಕುತ್ತಿಗೆಗೆ ಹಗ್ಗದಿಂದ ಬಿಗಿದು ಅವರನ್ನು ಕೊಲ್ಲಲಾಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ.ಸಧ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಪುರ್ಬ ಮೇಧಿನಿಪುರ ಜಿಲ್ಲೆ  ಚಂದೇಬೇರಿಯಾ ಗ್ರಾಮದ ತಮ್ಮ ಮನೆಯಿಂದ ಫೆಬ್ರವರಿ 7ರಂದು ಹೊರಟಿದ್ದರು. ಕೋಲ್ಘಾಟ್ ಗೆ ತೆರಳುವುದಾಗಿ ಅವರು ಮನೆಯಲ್ಲಿ ತಿಳಿಸಿದ್ದಾೠ. ಅಡಾಏ 9 ಗಂಟೆ ಸುಮಾರಿಗೆ ಕರೆಮಾಡಿ ತಮ್ಮ ಸ್ನೇಹಿತರೊಡನೆ ತಾವು ಮಾಲ್ಡಾಗೆ ತೆರಳುವುದಾಗಿ ಹೇಳಿದ್ದರು.ಮೃತರ ಮಡದಿ ಮಹುರಾ ರಾಯ್ ಹೇಳಿದ್ದಾರೆ.
ಫೆಬ್ರುವರಿ 9 ರಂದು ಮರೀಶ್ದಾ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬವು ನಾಪತ್ತೆ ಪ್ರಕರಣವನ್ನು ದಾಖಲಿಸಿದೆ. ಈ ನಡುವೆ  ಟಿಎಂಸಿ ತನ್ನ ನಾಯಕನ ಸಾವಿಗೆ ಬಿಜೆಪಿ ಹೊಣೆ ಎಂದು ಆರೋಪಿಸಿದೆ."ಬಿಜೆಪಿ ಪಕ್ಷದ ನಾಯಕರು ನಮ್ಮ ಪಕ್ಷದ ಮುಖಂಡನ ಕೊಲೆಗೆ ಸಂಚು ಮಾಡಿದ್ದರು. ಎಂದು ಪುರ್ಬಾ ಮೇಧಿನಿಪುರ ಟಿಎಂಸಿ ಕಾರ್ಯದರ್ಶಿ ಕನಿಷ್ಕಫಂಡ ಹೇಳಿದರು ಆದರೆ  ಬಿಜೆಪಿನ ಕಾಂತಿ ಮಂಡಲ್ ಮುಖ್ಯಸ್ಥ ಮಹೇಶ್ ಸುರ್ ಟಿಎಂಸಿ ಆರೋಪವನ್ನು ನಿರಾಕರಿಸಿದ್ದಾರೆ., "ಬಿಜೆಪಿ ಅಂತಹಲಸವನ್ನು ಎಂದಿಗೂ ಮಾಡುವುದಿಲ್ಲ. ಇದು ಕಾಂತಿಯಲ್ಲಿರುವ ಟಿಎಂಸಿ ನಾಯಕರ ಪಿತೂರಿ ಅಥವಾ ಅಂತಃಕಲಹದಿಂದ ಆಗಿರುವ ಸಾಧ್ಯತೆ ಇದೆ" ಅವರು ಹೇಳಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹತ್ಯೆಯಾಗಿದ್ದಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ಅವರ  ಮನೆಗೆ ತೆರಳಿ ಕುಟುಂಬಿಕರಿಗೆ ಸಾಂತ್ವನ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com