ಪೌರತ್ವ ಮಸೂದೆಗೆ ವಿರೋಧ: 'ಭಾರತ ರತ್ನ' ತಿರಸ್ಕರಿಸಿದ ಭೂಪೇನ್ ಹಜಾರಿಕಾ ಪುತ್ರ!

ಪ್ರಸಿದ್ಧ ಗಾಯಕ-ಸಂಯೋಜಕ ಭೂಪನ್ ಹಜಾರಿಕಾ ಅವರಿಗೆ ಸಂದಿದ್ದ ಭಾರತ ರತ್ನ ಗೌರವವನ್ನುಅವರ ಪುತ್ರ ನಿರಾಕರಿಸಿದ್ದಾರೆ.
ಭೂಪನ್ ಹಜಾರಿಕಾ
ಭೂಪನ್ ಹಜಾರಿಕಾ
ಗೌಹಾಟಿ: ಪ್ರಸಿದ್ಧ ಗಾಯಕ-ಸಂಯೋಜಕ ಭೂಪನ್ ಹಜಾರಿಕಾ ಅವರಿಗೆ ಸಂದಿದ್ದ ಭಾರತ ರತ್ನ ಗೌರವವನ್ನು ಅವರ ಪುತ್ರ ನಿರಾಕರಿಸಿದ್ದಾರೆ. ಹಜಾರಿಕಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ಪುರಸ್ಕಾರ ನೀಡಿ ಈಶಾನ್ಯ ರಾಜ್ಯಗಳಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ಮಸೂದೆಗೆ ಬೆಂಬಲಿಸಲು ಹುನ್ನಾರ ಹೆಣೆಯಲಾಗಿದೆ ಎಂದು ರಾಜಕೀಯ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
ಹಜಾರಿಕಾ ಅವರ ಕುಟುಂಬದ ಇತರೆ ಸದಸ್ಯರು ಹಜಾರಿಕಾಗೆ ಸಂದ ಗೌರವಕ್ಕೆ ಹರ್ಷ ವ್ಯಕ್ತಪಡಿಸಿದ್ದರೆ ಅಮೆರಿಕಾದಲ್ಲಿ ನೆಲೆಸಿದ್ದ ಅವರ ಪುತ್ರ ತೇಜ್ ಮಾತ್ರ ತಾವು ಈ ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
 ಅಮೆರಿಕದಿಂದ ದೂರವಾಣಿ ಮೂಲಕ ಅಸ್ಸಾಮಿ ದಿನಪತ್ರಿಕೆಗೆ ಮಾತನಾಡಿದ ಅವರು ಪೌರತ್ವ ಮಸೂದೆ ನಮ್ಮ ತಂದೆಯವರ ನಂಬಿಕೆಗೆ ವಿರುದ್ಧವಾಗಿದೆ.ಇಂತಹಾ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ.ಇದು ನನ್ನಲ್ಲಿ ಅಸಮಾಧಾನವನ್ನು ಹುಟ್ಟಿಸಿದೆ, ಹೀಗಾಗಿ ನಾನು ನನ್ನ ತಂದೆಗೆ ನೀಡಲಾಗಿರುವ ಗೌರವವನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ.
"ಅಸ್ಸಾಂನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ನನ್ನ ಅರಿವಿದೆ. ಹೋರಾಟದ ಕಾಲದಲ್ಲಿ ಯಾವಾಗಲೂ ಅಸ್ಸಾಂನ ಜನರ ಪರವಾಗಿ ನಿಂತಿದ್ದ ಹಜಾರಿಕಾ ಬಹುಶಃ ಗೌರವವನ್ನು ಸ್ವೀಕರಿಸಲು ಬಯಸುತ್ತಿರಲಿಲ್ಲ.ಹಾಗಾಗಿ, ಅವನ ಮಗನಾಗಿ ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ಮನಸ್ಸಾಕ್ಷಿಯು ಅದನ್ನು ಒಪ್ಪಿಕೊಳ್ಳಲಾರದು." ತೇಜ್  ಹಜಾರಿಕಾ ಹೇಳಿದ್ದಾರೆ.
ಆದಾಗ್ಯೂ, ಅವರ ಹೇಳಿಕೆಗಳು ಕುಟುಂಬದ ಇತರ್ರ ಭಾವನೆಗಳೊಡನೆ ಕೂಡಿರಲಿಲ್ಲ."ಭೂಪೇನ್ ಹಜಾರಿಕಾಗೆ ನೀಡಿರುವ ಭಾರತ ರತ್ನ ಪ್ರಶಸ್ತಿ ಇಡೀ ಈಶಾನ್ಯ ರಾಜ್ಯಗಳಿಗೆ ಸಂದ ಗೌರವ. ಎಂದು ಕುಟುಂಬದ ಇತರರು ಹೇಳಿದ್ದಾರೆ.ಹಜಾರಿಕಾಗೆ ಭಾರತ ರತ್ನ ನೀಡಿದ ಬಗ್ಗೆ ನಾವು ಅತೃಪ್ತರಾಗಿದ್ದೇವೆಂದು ಹೇಳಲಾಗದು ಎಂದು ಅವರ ಅತ್ತಿಗೆ  ಮನೀಶಾ ಹಜಾರಿಕಾ ಪತ್ರಿಕೆಗೆ ತಿಳೀಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವದಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾನಾಜಿ ದೇಶಮುಖ್ ಹಾಗೂ ಹಿರಿಯ ಸಂಗೀತ ಸಂಯೋಜಕ ಭೂಪೇನ್ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com