ಸೆಪ್ಟೆಂಬರ್ ನಲ್ಲಿ ಮೊದಲ ರಾಫೆಲ್ ಯುದ್ಧ ವಿಮಾನ ಭಾರತಕ್ಕೆ ಪೂರೈಕೆ

ಈ ವರ್ಷದ ಸೆಪ್ಟೆಂಬರ್ ವೇಳೆಗೆ ಮೊದಲ ಯುದ್ಧ ವಿಮಾನ ಭಾರತಕ್ಕೆ ಪೂರೈಕೆಯಾಗಲಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿರುವಂತೆ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಮೊದಲ ಯುದ್ಧ ವಿಮಾನ ಭಾರತಕ್ಕೆ ಪೂರೈಕೆಯಾಗಲಿದೆ ಎಂದು  ಭಾರತೀಯ ವಾಯುಪಡೆಯ ಅಧಿಕಾರಿ ಹೇಳಿದ್ದಾರೆ.

ಫ್ರಾನ್ಸಿನ ರಕ್ಷಣಾ ಕಂಪನಿಯಿಂದ ತಯಾರಾಗುವ ಈ ವಿಮಾನವನ್ನು ಭಾರತ ಖರೀದಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ವಾಯುಪಡೆ ಉಪ ಮುಖ್ಯಸ್ಥ ಚೀಪ್ ಏರ್ ಮಾರ್ಷಲ್  ವಿ.ಎಸ್. ಚೌದರಿ, S-400 ವಾಯು ಕ್ಷಿಪಣಿ ವ್ಯವಸ್ಥೆಯ ವ್ಯವಹಾರದಲ್ಲಿ ರಷ್ಯನ್ನರು ಯಾವುದೇ ಸಾರ್ವಭೌಮ ಖಾತರಿಯನ್ನು ನೀಡಲಿಲ್ಲ ಎಂದು ತಿಳಿಸಿದರು.

ನಂತರ ವಾಯುಪಡೆ ಬಲವರ್ದನೆ ಕುರಿತಂತೆ ಮಾತನಾಡಿದ  ಏರ್  ಮಾರ್ಷಲ್  ಅನಿಲ್ ಕೊಸ್ಲಾ , ವಾಯುಪಡೆಗೆ  ರಫೇಲ್ ಯುದ್ಧ ವಿಮಾನ ಸೇರ್ಪಡೆಯಿಂದ ನಮ್ಮ ಯುದ್ಧ ಸಾಮರ್ಥ್ಯಗಳಿಗೆ ದೊಡ್ಡ ಉತ್ತೇಜನ ದೊರೆತಂತಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com