70 ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನ ಬಂಧನ!

ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ 70 ಜನರ ಸಾವಿಗೆ ಕಾರಣವಾಗಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನನ್ನು ಹರಿದ್ವಾರದ ಝಬ್ರೇರಾ ಪ್ರದೇಶದಿಂದ ಬಂಧಿಸಲಾಗಿದೆ.

Published: 12th February 2019 12:00 PM  |   Last Updated: 12th February 2019 12:37 PM   |  A+A-


Father-son held for making hooch that killed over 70

70 ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನ ಬಂಧನ!

Posted By : SBV SBV
Source : PTI
ಲಕ್ನೊ: ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ 70 ಜನರ ಸಾವಿಗೆ ಕಾರಣವಾಗಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನನ್ನು ಹರಿದ್ವಾರದ ಝಬ್ರೇರಾ ಪ್ರದೇಶದಿಂದ ಬಂಧಿಸಲಾಗಿದೆ

ಉತ್ತರ ಪ್ರದೇಶದ ಶರಣ್ ಪುರ ಜಿಲ್ಲೆಯ ಪುಡೇನ್ ಗ್ರಾಮದವರಾದ ಹರ್ದೇವ್ ಹಾಗೂ ಸುಖ್ವೀಂದರ್ ಎಂಬ ಇಬ್ಬರು ಬಂಧಿತ ವ್ಯಕ್ತಿಗಳಾಗಿದ್ದು, ಉತ್ತರಾಖಂಡ್ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ಇಬ್ಬರು ವ್ಯಕ್ತಿಗಳು ತಂದೆ-ಮಗನಾಗಿದ್ದಾರೆ. ನಕಲಿ ಮದ್ಯವನ್ನು ತಾವು ತಯಾರಿಸಿದ್ದಲ್ಲವೆಂದೂ, ಅದನ್ನು ಭಗ್ವಾನ್ ಪುರ ಪ್ರದೇಶದಲ್ಲಿರುವ ಅರ್ಜುನ್ ಎಂಬಾತನಿಂದ ಸುಮಾರು 400 ಲೀಟರ್ ನಷ್ಟು ಮದ್ಯ ತಂದಿದ್ದಾಗಿಯೂ ಪ್ರಾಥಮಿಕ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. 
 
ಬಂಧಿತರಿಂದ ಪಡೆದ ಮಾಹಿತಿಯನ್ನಾಧರಿಸಿ ಪೊಲೀಸರು ಈಗ ಅರ್ಜುನ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಘಟನೆ ಬಗ್ಗೆ ತನಿಖೆ ನಡೆಸಲು ಎಸ್ ಐಟಿ ರಚನೆ ಮಾಡಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಈ ವರೆಗೂ ನಾಲ್ವರನ್ನು ಬಂಧಿಸಲಾಗಿದೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp