ವಿವಾಹ ನೊಂದಣಿ ಮಾಡದ ಎನ್.ಆರ್.ಐ.ಗಳ ಪಾಸ್ ಪೋರ್ಟ್ ರದ್ದು: ಹೊಸ ಕಾನೂನು ಜಾರಿಗೆ ಕೇಂದ್ರ ಮುಂದು

ಅನಿವಾಸಿ ಭಾರತೀಯರು ತಾವು ವಿವಾಹವಾಗಿ 30 ದಿನಗಳಲ್ಲಿ ವಿವಾಹ ನೊಂದಣಿ ಮಾಡಿಸದೆ ಹೋದರೆ ಅವರ ಪಾಸ್ ಪೋರ್ಟ್ ಗಳನ್ನು ಹಿಂಪಡೆಯುವಕಠಿಣ ಕ್ರಮ ಕೈಗೊಳ್ಳುವದಕ್ಕೆ ಅವಕಾಶವಿದೆ

Published: 12th February 2019 12:00 PM  |   Last Updated: 12th February 2019 03:13 AM   |  A+A-


NRIs who don't register their marriage can have passports impounded: Bill

ವಿವಾಹ ನೊಂದಣಿ ಮಾಡದ ಎನ್.ಆರ್.ಐ.ಗಳ ಪಾಸ್ ಪೋರ್ಟ್ ರದ್ದು

Posted By : RHN RHN
Source : The New Indian Express
ನವದೆಹಲಿ: ಅನಿವಾಸಿ ಭಾರತೀಯರು ತಾವು ವಿವಾಹವಾಗಿ 30 ದಿನಗಳಲ್ಲಿ ವಿವಾಹ ನೊಂದಣಿ ಮಾಡಿಸದೆ ಹೋದರೆ ಅವರ ಪಾಸ್ ಪೋರ್ಟ್ ಗಳನ್ನು ಹಿಂಪಡೆಯುವಕಠಿಣ ಕ್ರಮ ಕೈಗೊಳ್ಳುವದಕ್ಕೆ ಅವಕಾಶವಿದೆ. ಇಂತಹಾ ಒಂದು ಮದೂದೆ ಸೋಮವಾರ ರಾಜ್ಯಸಭೆಯಲ್ಲಿ ಮಂಡನೆ ಆಗಲಿದೆ. ಈ ಮಸೂದೆಯಂತೆ ಯಾವುದೇ ಅನಿವಾಸಿ ಭಾರತೀಯರುಅವರು ಭಾರತೀಯ ಪೌರತ್ವ ಹೊಂದಿದ್ದರಾದರೆ ಅಂತಹಾ ವ್ಯಕ್ತಿ ತಾವು ವಿವಾಹ ನೊಂದಣಿ ಮಾಡಿಸುವುದು ಕಡ್ಡಾಯವಾಗಲಿದೆ.

ಅನಿವಾಸಿ ಭಾರತೀಯರ ವಿವಾಹ ನೊಂದಣಿ ಮಸೂದೆ 2019 ಮಸೂದೆಯು ಅವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ಚರ ಸ್ಥಿರ ಆಸ್ತಿಗಳನ್ನು ವಶಕೆ ಪಡೆಯಲು ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸುತ್ತದೆ.ಅಲ್ಲದೆ ಅವರು "ಘೋಷಿತ ಅಪರಾಧಿಗಳು" ಎಂದು ಘೋಷಿಸಲ್ಪಡುವರು.

ಕರಡು ಕಾನೂನಿನನ್ವಯ ನ್ಯಾಯಾಲಯಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶೇಷವಾಗಿ ಗೊತ್ತುಪಡಿಸಿದ ವೆಬ್ ಸೈಟ್ ಮೂಲಕ ಆರೋಪಿಗಳಿಗೆ ಸಮನ್ಸ್ ಮತ್ತು ವಾರಂಟ್ ಗಳನ್ನು ಕಳುಹಿಸಲು ಅವಕಾಶವಿದೆ.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೇಲ್ಮನೆಯಲ್ಲಿ ಈ ಮಸೂದೆಯನ್ನು ಪರಿಚಯಿಸಿದ್ದಾರೆ.ಅನಿವಾಸಿ ಭಾರತೀಯರು ಭಾರತೀಯ ಯುವತಿಯರನ್ನು ಮೋಸದಿಂದ ವಿವಾಹವಾಗುವುದನ್ನು ತಪ್ಪಿಸಲು ಈ ಕ್ರಮ ಜರುಗಿಸಲಾಗುತ್ತಿದೆ.

ಮಸೂದೆ ಪ್ರಕಾರ ಪಾಸ್ ಪೋರ್ಟ್ ಅಧಿಕಾರಿಗಳುಪಾಸ್ ಪೋರ್ಟ ಅಥವಾ ಆರೋಪಿಯ ಇನ್ನಾವುದೇ ಪ್ರಯಾಣದ ದಾಖಲೆಗಳನ್ನು ರದ್ದುಗೊಳಿಸಲು ಅಥವಾ ಅನುಮತಿ ನಿರಾಕರಿಸಲು ಫಾಸ್ ಪೋರ್ಟ್ ಆಕ್ಟ್ ಹಾಗೂ ಕ್ರಿಮಿನಲ್ ಪ್ರೊಸೀಜರ್ಸ್ ನ ವಿಧಿಯನ್ನು  ತಿದ್ದುಪಡಿ ಮಾಡಲಾಗುವುದು ಮತ್ತು ನ್ಯಾಯಾಲಯಗಳು ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗುವುದು.ಇಲ್ಲಿ ಎನ್ನಾರೈ ಒಬ್ಬ ಭಾರತೀಯ ನಾಗರಿಕನನ್ನು ಮದುವೆಯಾಗಿದ್ದರೆ, ಸ್ಥಳೀಯ ಕಾನೂನಿನ ಪ್ರಕಾರ ಮದುವೆ ನೋಂದಾಯಿಸಿಕೊಳ್ಳಬೇಕು ಎಂದು ಬಿಲ್ ಹೇಳುತ್ತದೆ.ಮದುವೆ ವಿದೇಶದಲ್ಲಿ ನಡೆಯುವುದಾದರೆ, ವಿದೇಶಿ ರಾಷ್ಟ್ರಗಳಲ್ಲಿ ನೇಮಕವಾಗಿರುವ ಗೊತ್ತಾದ ಅಧಿಕಾರಿಗಳಲ್ಲಿ ಅದರ ನೊಂದಣಿ ಆಗಬೇಕು.ಪ್ರಸ್ತಾಪಿತ ಕಾನೂನು ಭಾರತೀಯ ಮಹಿಳೆಯರಿಗೆ ಭಾರತದ ಒಳಗೆ ಅಥವಾ ಹೊರಗೆ ಮದುವೆಯಾಗುತ್ತಿರುವ ಎನ್ ಆರ್ ಐ ಗಳಿಗೆ ಅನ್ವಯಿಸುತ್ತದೆ.

ಎನ್ ಆರ್ ಐ ಪುರುಷರು ತಮ್ಮ ಮಡದಿಯನ್ನು ವಿದೇಶಕ್ಕೆ ಕರೆದೊಯ್ದು ಅಲ್ಲಿ ಕೈಬಿಡುವ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿದೆ.ಗಂಡಂದಿರು ತಮ್ಮ ಹೆಂಡತಿಯನ್ನು ಮಾನಸಿಕ ಮತ್ತು ದೈಹಿಕ ಹಿಂಸೆಗೆ ಗುರಿಪಡಿಸುತ್ತಾರೆ. ಈ ಸಂಬಂಧ ಅನೇಕ ದೂರುಗಳನ್ನು ಸಚಿವಾಲಯ ಸ್ವೀಕರಿಸಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಒಂದು ಪ್ರಶ್ನೆಗೆ ಉತ್ತರಿಸಿದ ಸುಷ್ಮಾ ಸ್ವರಾಜ್ ಎನ್ ಆರ್ ಐ ಗಂಡಂದಿರು ತೊರೆದ ಭಾರತೀಯ ಮಹಿಳೆಯರ ಸಂಖ್ಯೆ 2015 ಜನವರಿಯಿಂದ 2017 ನವೆಂಬರ್ ವರೆಗೆ 3,328 ಆಗಿದೆ. ಭಾರತೀಯ ಮಹಿಳೆಯರು ತಮ್ಮ ಅನಿವಾಸಿ ಪತಿಯಿಂದ ಬೇರಾಗಿರುವ, ಕಿರುಕುಳಕ್ಕೀಡಾಗಿರುವ ಅನೇಕ ದೂರು ಬಂದ ಹಿನ್ನೆಲೆಯಲ್ಲಿ ಈ ಮಸೂದೆ ಜಾರಿ ಅನಿವಾರ್ಯವಾಗಿದೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp