ತ್ರಿಪುರಾ: ಪ್ರಧಾನಿ ಮೋದಿ, ಸಿಎಂ ಬಿಪ್ಲಬ್ ದೇಬ್ ಇದ್ದ ವೇದಿಕೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ

ಪ್ರಧಾನಿ ಮೋದಿ ಮತ್ತು ಸಿಎಂ ಬಿಪ್ಲಬ್ ದೇಬ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ತ್ರಿಪುರಾ ಸಚಿವನೋರ್ವ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾನೆ.

Published: 12th February 2019 12:00 PM  |   Last Updated: 12th February 2019 09:57 AM   |  A+A-


On Stage With PM Modi, Tripura Minister Groped Colleague, Video Shows

ತ್ರಿಪುರಾ ಸಚಿವರಿಂದ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ

Posted By : SVN SVN
Source : Online Desk
ಅಗರ್ತಲಾ: ಪ್ರಧಾನಿ ಮೋದಿ ಮತ್ತು ಸಿಎಂ ಬಿಪ್ಲಬ್ ದೇಬ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ತ್ರಿಪುರಾ ಸಚಿವನೋರ್ವ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾನೆ.

ಹೌದು..ತ್ರಿಪುರಾ ಸಚಿವ ಮನೋಜ್ ಕುಮಾರ್ ಕಾಂತಿ ದೇಬ್ ಇಂತಹ ನೀಚ ಕೃತ್ಯವೆಸಗಿ ಸಿಕ್ಕಿಬಿದ್ದಿದ್ದು, ಇದೀಗ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇನ್ನು ವಿಡಿಯೋದಲ್ಲಿರುವ ಮಹಿಳೆ ಕೂಡ ತ್ರಿಪುರಾದ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಸಚಿವರಾಗಿದ್ದು, ಸಾರ್ವಜನಿಕವಾಗಿ ಇಂತಹ ಮುಜುಗರವನ್ನೆದುರಿಸಿದ್ದಾರೆ.

ಈ ವಿಡಿಯೋ ಇದೀಗ ತ್ರಿಪುರಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದು, ವಿಪಕ್ಷಗಳು ಮನೋಜ್ ಕುಮಾರ್ ಕಾಂತಿ ಅವರ ರಾಜಿನಾಮೆಗೆ ಅಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಡ ಪಕ್ಷ ಮುಖಂಡ ಬಿಜನ್ ಧಾರ್ ಅವರು ಸಾರ್ವಜನಿಕವಾಗಿ ಎಲ್ಲರೂ ನೋಡುತ್ತಿದ್ದಾರೆ ಎಂಬ ಪರಿಜ್ಞಾನ ಕೂಡ ಇಲ್ಲದೆ ಮಹಿಳೆ ಮೇಲೆ ಕೈಹಾಕಿ ಮನೋಜ್ ದೇಬ್ ತಮ್ಮ ಗೋಮುಖ ವ್ಯಾಘ್ರತನವನ್ನು ಪ್ರದರ್ಶನ ಮಾಡಿದ್ದಾರೆ. ಈ ಕೂಡಲೇ ಸಿಎಂ ಬಿಪ್ಲಬ್ ದೇಬ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಅಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಆರೋಪಿ ಸಚಿವ ಮನೋಜ್ ದೇಬ್, ಇದು ತಮ್ಮ ವಿರುದ್ಧ ಹೆಣೆದಿರುವ ಷಡ್ಯಂತ್ರ, ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp