ಬಿಕಾನೇರ್ ಭೂಹಗರಣ: ಪತ್ನಿ ಪ್ರಿಯಾಂಕಾ ಜೊತೆ ಇ.ಡಿ ಕಚೇರಿಗೆ ಆಗಮಿಸಿದ ರಾಬರ್ಟ್ ವಾದ್ರಾ

ಬಿಕಾನೇರ್ ಭೂ ಹಗರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಜೈಪುರದ ಜಾರಿ ನಿರ್ದೇಶನಾಲಯ ಕಚೇರಿಗೆ ತಮ್ಮ ....

Published: 12th February 2019 12:00 PM  |   Last Updated: 12th February 2019 01:32 AM   |  A+A-


Robert Vadra  And priyanka Gandhi (file image)

ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ( ಸಂಗ್ರಹ ಚಿತ್ರ)

Posted By : SD SD
Source : PTI
ಜೈಪುರ: ಬಿಕಾನೇರ್ ಭೂ ಹಗರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಜೈಪುರದ ಜಾರಿ ನಿರ್ದೇಶನಾಲಯ ಕಚೇರಿಗೆ ತಮ್ಮ ತಾಯಿ ಜೊತೆ ಹಾಜರಾದರು. 

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ನಿ ಪ್ರಿಯಾಂಕಾ ಗಾಂಧಿ ಅವರು ರಾಬರ್ಟ್‌ ವಾದ್ರಾ ಜತೆ ಇಡಿ ಕಾರ್ಯಾಲಯದ ವರೆಗೆ ಆಗಮಿಸಿದರು. 

ಜಾರಿ ನಿರ್ದೇಶನಾಲಯದ ಎದುರು ವಾದ್ರಾ ತನಿಖೆಗೆ ಹಾಜರಾಗುತ್ತಿರುವುದು ನಾಲ್ಕನೇ ಬಾರಿ ಮತ್ತು ಜೈಪುರದಲ್ಲಿ ಮೊದಲನೇ ಬಾರಿ ಯಾಗಿದೆ. 

ಭೂ ಕಬಳಿಕೆ ಹಗರಣದ ತನಿಖೆ ಸಂಬಂಧ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಕೂಡದೆಂದು ವಿನಂತಿಸಿಕೊಂಡದ್ದನ್ನು ಪರಿಗಣಿಸಿದ್ದ ರಾಜಸ್ಥಾನ ಹೈಕೋರ್ಟ್‌, ಜೈಪುರದಲ್ಲಿನ ಇಡಿ ಕಾರ್ಯಾಲಯದಲ್ಲಿ ತನಿಖೆಗೆ ಹಾಜರಾಗಿ ಸಹಕರಿಸುವಂತೆ ರಾಬರ್ಟ್‌ ವಾದ್ರಾ ಮತ್ತು ಆತನ ತಾಯಿಗೆ ಸೂಚಿಸಿತ್ತು. 

ಅದರಂತೆ ರಾಬರ್ಟ್ ವಾದ್ರ ತಮ್ಮ ತಾಯಿಯನ್ನು ಕೂಡ ಇಡಿ ಕಚೇರಿಗೆ ಕರೆ ತಂದಿದ್ದರು, ಇನ್ನೂ ಹಿರಿಯ ನಾಗರಿಕರಿಗೆ ಮೋದಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ರಾಬರ್ಟ್ ವಾದ್ರಾ  ಆರೋಪಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp