ದ್ವೇಷಪೂರಿತ ಮೋದಿ ಸರ್ಕಾರದಿಂದ ನನ್ನ ತಾಯಿಗೆ ಕಿರುಕುಳ- ರಾಬರ್ಟ್ ವಾದ್ರಾ

ದ್ವೇಷಪೂರಿತ ಮೋದಿ ಸರ್ಕಾರದಿಂದ ನನ್ನ ತಾಯಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸೋನಿಯಾಗಾಂಧಿ ಆಳಿಯ ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.
ತಾಯಿಯೊಂದಿಗೆ ರಾಬರ್ಟ್ ವಾದ್ರಾ
ತಾಯಿಯೊಂದಿಗೆ ರಾಬರ್ಟ್ ವಾದ್ರಾ

ನವದೆಹಲಿ: ದ್ವೇಷಪೂರಿತ ಮೋದಿ ಸರ್ಕಾರದಿಂದ ನನ್ನ ತಾಯಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ  ಆರೋಪಿಸಿದ್ದಾರೆ.

ಬಿಕಾನೇರ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಜೈಪುರದಲ್ಲಿ ಇಂದು ರಾಬರ್ಟ್ ವಾದ್ರಾ ಹಾಗೂ ಅವರ ತಾಯಿ ಹಾಜರಾಗಿ ವಿಚಾರಣೆ ಎದುರಿಸಿದ ನಂತರ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

'' ನನ್ನ ತಾಯಿ 75ರ ವೃದ್ಧೆ. ಆಕೆ ಕಾರು ಅಪಘಾತದಲ್ಲಿ ತನ್ನ ಮಗಳನ್ನು ಕಳೆದುಕೊಂಡಿದ್ದಾಳೆ. ಮಧುಮೇಹದಿಂದ ಬಳಲುತ್ತಿದ್ದ ಒರ್ವ ಮಗ ಹಾಗೂ ಆಕೆಯ ಪತಿಯನ್ನು ಕೂಡಾ ಕಳೆದುಕೊಂಡಿದ್ದಾರೆ. ಮೂವರನ್ನು ಕಳೆದುಕೊಂಡು ನನ್ನೊಂದಿಗೆ ಸಮಯ ಕಳೆಯುತ್ತಿದ್ದಾರೆ.  ಆದ್ದರಿಂದ ಆಕೆಯನ್ನು ನೋಡಿಕೊಳ್ಳುತ್ತಿದ್ದೇನೆ. ಆದರೆ, ಈಗ ಅವರು ನನ್ನ ಕಚೇರಿಯಲ್ಲಿರುತ್ತಿದ್ದರಿಂದ ಆರೋಪಿ ಎಂಬಂತೆ ವಿಚಾರಣೆ ನಡೆಸುತ್ತಿದ್ದು, ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರವಿದ್ದಂತೆ  ತಮ್ಮನ್ನು ಟಾರ್ಗೆಟ್ ಮಾಡಿರುವ ಉದ್ದೇಶ ತಿಳಿಯುತ್ತಿಲ್ಲ ಎಂದಿರುವ ರಾಬರ್ಟ್ ವಾದ್ರಾ, ನಾಲ್ಕು ವರ್ಷ ಎಂಟು ತಿಂಗಳಿಂದ ವಿಚಾರಣೆ ನಡೆಸದೆ ಈಗ  ವಿಚಾರಣೆ ನಡೆಸುವ ಉದ್ದೇಶವೇನಿದೆ ಎಂದು ಪ್ರಶ್ನಿಸಿದ್ದಾರೆ.

ಎಲ್ಲಾ ಪ್ರಶ್ನೆಗಳಿಗೂ ಘನತೆ ಗೌರವದೊಂದಿಗೆ ಉತ್ತರಿಸುತ್ತೇನೆ. ನನಗೆ ದೇವರ ಮೇಲೆ ನಂಬಿಕೆ ಇದ್ದು, ದೇವರು ಸದಾ ನಮ್ಮ ಜೊತೆಗಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com