ಟಿಕ್ ಟೋಕ್ ಆಪ್ ವಿರುದ್ಧ ತಮಿಳುನಾಡಿನಲ್ಲಿ ತೀವ್ರ ಆಕ್ರೋಶ: ಬ್ಯಾನ್ ಮಾಡಲು ಪ್ರಧಾನಿಗೆ ಮನವಿ ಸಾಧ್ಯತೆ, ಏಕೆ ಗೊತ್ತೇ?

ತಮಿಳುನಾಡಿನಲ್ಲಿ ಟಿಕ್ ಟೋಕ್ ಆಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಟಿಕ್ ಟೋಕ್ ಆಪ್ ನ್ನು ನಿಷೇಧಿಸುವಂತೆ ಪ್ರಧಾನಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಟಿಕ್ ಟೋಕ್ ಆಪ್
ಟಿಕ್ ಟೋಕ್ ಆಪ್
ಚೆನ್ನೈ: ತಮಿಳುನಾಡಿನಲ್ಲಿ ಟಿಕ್ ಟೋಕ್ ಆಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಟಿಕ್ ಟೋಕ್ ಆಪ್ ನ್ನು ನಿಷೇಧಿಸುವಂತೆ ಪ್ರಧಾನಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. 
ಟಿಕ್ ಟೋಕ್ ಆಪ್ ನಿಂದ ತಮಿಳುನಾಡು ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದ್ದು, ರಾಜ್ಯ ಸರ್ಕಾರವೇ ಆಪ್ ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ಬಗ್ಗೆ ತಮಿಳುನಾಡು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಂ ಮಣಿಕಂಠನ್ ಸುಳಿವು ನೀಡಿದ್ದಾರೆ. 
ಟಿಕ್ ಟೋಕ್ ಅಪ್ ನಲ್ಲಿ ಅಶ್ಲೀಲ ವಿಡೀಯೋಗಳು ಹರಿಡಾಡುತ್ತಿದ್ದು, ರಾಜ್ಯದ ಸಂಸ್ಕೃತಿಗೆ ಧಕ್ಕೆ ಉಂಟುಮಾಡುತ್ತಿದೆ. ಈ ಮೊಬೈಲ್ ಆಪ್ ನ್ನು ನಿಷೇಧಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವಿಧಾನಸಭಾ ಸದಸ್ಯ ಅನ್ಸಾರಿ ಸದನದಲ್ಲಿ ಆಗ್ರಹಿಸಿದರು. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಣಿಕಂಠನ್ ಈ ಹಿಂದೆ ಬ್ಲೂ ವೇಲ್ ಆಪ್ ನಿಷೇಧಿಸುವುದಕ್ಕೆ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿತ್ತು.  ಹಾಗೆಯೇ ಈಗಲೂ ಟಿಕ್ ಟೋಕ್ ಆಪ್ ನಿಷೆಧಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದಾರೆ. ಟಿಕ್ ಟೋಕ್ ಆಪ್ ಈ ವರೆಗೂ 100 ಮಿಲಿಯನ್ ಡೌನ್ ಲೋಡ್ ಆಗಿದ್ದು, ಇದರಿಂದಾಗಿ ಕಿರಿಕುಳ ನೀಡುವ ಪ್ರಕರಣಗಳೂ ಹೆಚ್ಚಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com