ಕೋರ್ಟ್ ಒಳಗೆ ಅಂಬಾನಿ ಪರ, ಹೊರಗೆ ಅಂಬಾನಿ ವಿರೋಧಿ!; ಕಪಿಲ್ ಸಿಬಲ್ ಡಬಲ್ ರೋಲ್!

ಅದೇ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅನಿಲ್ ಅಂಬಾನಿ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

Published: 13th February 2019 12:00 PM  |   Last Updated: 13th February 2019 12:07 PM   |  A+A-


Congress Leader Kapil Sibal defends Anil Ambani in court, attacks him outside

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ತೀವ್ರ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ಅದೇ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅನಿಲ್ ಅಂಬಾನಿ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಎರಿಕ್ಸನ್ ಇಂಡಿಯಾ ಸಂಸ್ಥೆ ಅನಿಲ್ ಅಂಬಾನಿ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ವಕೀಲರೂ ಕೂಡ ಆಗಿರುವ ಕಪಿಲ್ ಸಿಬಲ್ ಅನಿಲ್ ಅಂಬಾನಿ ಪರ ವಾದ ಮಂಡಿಸುತ್ತಿದ್ದಾರೆ ಎನ್ನಲಾಗಿದೆ. 

ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ  ಎರಿಕ್ಸನ್ ಇಂಡಿಯಾ ಅನಿಲ್ ಅಂಬಾನಿ ವಿರುದ್ಧ ಹಾಕಿರುವ ಪ್ರಕರಣದಲ್ಲಿ ಅನಿಲ್ ಪರ ವಾದಿಸಿದರ ಸಿಬಲ್, ಅದೇ ಹೊತ್ತಿಗೆ ರಫೇಲ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಮಾಡಿರುವ ಗಂಭೀರ ಆರೋಪವನ್ನು ಬೆಂಬಲಿಸಿ ಅನಿಲ್ ಅಂಬಾನಿ ಹೆಸರು ಬಳಸಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಕುರಿತು ಕೆಲ ಮಾಹಿತಿಗಳು ಟ್ವಿಟರ್ ಕೆಲ ಫೋಟೋಗಳು ಹರಿದಾಡುತ್ತಿದ್ದು, ಕಪಿಲ್ ಸಿಬಲ್ ಡಬಲ್ ರೋಲ್ ಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp