ದೆಹಲಿಯ ಪಶ್ಚಿಮ ಪುರಿಯಲ್ಲಿ ಹತ್ತಿ ಉರಿದ ಬೆಂಕಿ, 250ಕ್ಕೂ ಹೆಚ್ಚು ಮನೆಗಳು ಭಸ್ಮ

ರಾಷ್ಟ್ರ ರಾಜಧಾನಿ ದೆಹಲಿಯ ಪಶ್ಚಿಮ್ ಪುರಿ ಪ್ರದೇಶದ ಕೊಳಚೆ ಪ್ರದೇಶದಲ್ಲಿ ಬುಧವಾರ ಮುಂಜಾನೆ ...
ದೆಹಲಿಯ ಪಶ್ಚಿಮ ಪುರಿಯಲ್ಲಿ ಬೆಂಕಿ ಹತ್ತಿ ಉರಿದು ಭಸ್ಮಗೊಂಡ 250ಕ್ಕೂ ಹೆಚ್ಚು ಗುಡಿಸಲುಗಳು
ದೆಹಲಿಯ ಪಶ್ಚಿಮ ಪುರಿಯಲ್ಲಿ ಬೆಂಕಿ ಹತ್ತಿ ಉರಿದು ಭಸ್ಮಗೊಂಡ 250ಕ್ಕೂ ಹೆಚ್ಚು ಗುಡಿಸಲುಗಳು
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪಶ್ಚಿಮ್ ಪುರಿ ಪ್ರದೇಶದ ಕೊಳಚೆ ಪ್ರದೇಶದಲ್ಲಿ ಬುಧವಾರ ಮುಂಜಾನೆ ಉಂಟಾದ ಬೆಂಕಿ ಅವಘಡದಲ್ಲಿ ಸುಮಾರು 250 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿ ಉರಿದಿರಬಹುದು ಎಂದು ಶಂಕಿಸಲಾಗಿದೆ. 
ಕೂಡಲೇ ಸ್ಥಳಕ್ಕೆ 26 ಅಗ್ನಿಶಾಮಕ ವಾಹನಗಳನ್ನು ತರಿಸಲಾಗಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗುಡಿಸಲಿನಲ್ಲಿದ್ದ ಬಡ ಕೂಲಿ ಕಾರ್ಮಿಕರು ರಸ್ತೆಗೆ ಬರುವಂತಾಗಿದೆ. ಬೆಂಕಿಯನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು ಎರಡೂವರೆ ಗಂಟೆ ಸಮಯ ಹಿಡಿಯಿತು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಪರಿಸ್ಥಿತಿಯನ್ನು ಸಹಜತೆಗೆ ತರುವ ಕಾರ್ಯ ಪ್ರಗತಿಯಲ್ಲಿದೆ. 
ಘಟನೆಯಲ್ಲಿ ಕೆಲವು ವಾಹನಗಳು ಕೂಡ ಸುಟ್ಟು ಹೋಗಿವೆ ಎಂದು ಸ್ಥಳೀಯರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com