ಅಲೀಘರ್ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ನಿರ್ಧರಿಸಲಿರುವ 7 ಸದಸ್ಯ ಪೀಠ

ಅಲೀಘರ್ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್ ನ 7 ಸದಸ್ಯಪೀಠ ವಿಚಾರಣೆ ನಡೆಸಲಿದೆ.
ಅಲೀಘರ್ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ನಿರ್ಧರಿಸಲಿರುವ 7 ಸದಸ್ಯ ಪೀಠ
ಅಲೀಘರ್ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ನಿರ್ಧರಿಸಲಿರುವ 7 ಸದಸ್ಯ ಪೀಠ
ನವದೆಹಲಿ: ಅಲೀಘರ್ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್ ನ 7 ಸದಸ್ಯಪೀಠ ವಿಚಾರಣೆ ನಡೆಸಲಿದೆ. 
ಎಎಂಯುವನ್ನು ಅಲ್ಪಸಂಖ್ಯಾತ ವಿವಿ ಎಂದು ಪರಿಗಣಿಸಬೇಕೋ ಬೇಡವೋ ಎಂಬ ವಿಷಯದ ಬಗ್ಗೆ ತೀರ್ಪು ಪ್ರಕಟಿಸಲಿರುವ ಸುಪ್ರೀಂ ಕೋರ್ಟ್ ನ 7 ಸದಸ್ಯ ಪೀಠ 1967 ರ ಅಜೀಜ್ ಬಾಶಾ ಪ್ರಕರಣದ ತೀರ್ಪನ್ನೂ ಪರಿಗಣಿಸಲಿದೆ. ಅಲೀಘರ್ ಮುಸ್ಲಿಂ ವಿವಿ ಸಂಸತ್ ನ ಕಾಯ್ದೆಯ ಮೂಲಕ ಸ್ಥಾಪನೆ ಮಾಡಲಾಗಿರುವುದರಿಂದ ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು 1967 ರಲ್ಲಿ ಕೋರ್ಟ್ ತೀರ್ಪು ಪ್ರಕಟಿಸಿತ್ತು.
ಈಗ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ನ್ಯಾ.ಎಲ್ ನಾಗೇಶ್ವರ್ ರಾವ್ ಹಾಗೂ ನ್ಯಾ. ಸಂಜೀವ್ ಖನ್ನಾ ಅವರಿದ್ದ ಪೀಠ, ಅಲೀಘರ್ ವಿವಿಗೆ ಇರುವ ಅಲ್ಪಸಂಖ್ಯಾತ ಸ್ಥಾನಮಾನದ ವಿಷಯವನ್ನು 7 ಸದಸ್ಯರಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದೆ. 
ಎಎಂಯು ಪರ ವಕೀಲರಾದ ರಾಜೀವ್ ಧವನ್ ಅಜೀಜ್ ಬಾಷಾ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲನೆ ನಡೆಸಬೇಕೆಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ 7 ಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com