ಪುದುಚೇರಿ: ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಾಲಿ ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಅವರು ಸ್ವತಃ ರಸ್ತೆಗಿಳಿದು ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ ಕಿಡಿ ಕಾರಿದ್ದಾರೆ. ಪರಿಣಾಮ ಪುದುಚೇರಿಯಲ್ಲಿ ಈ ವರೆಗೂ ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪುದುಚೇರಿ: ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಾಲಿ ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಅವರು ಸ್ವತಃ ರಸ್ತೆಗಿಳಿದು ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ ಕಿಡಿ ಕಾರಿದ್ದಾರೆ. ಪರಿಣಾಮ ಪುದುಚೇರಿಯಲ್ಲಿ ಈ ವರೆಗೂ ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಕೇಂದ್ರಾಡಳಿತ ರಾಜ್ಯವಾಗಿರುವ ಪುದುಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ ಜಾರಿಯಲ್ಲಿದ್ದರೂ, ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಸಾರಿಗೆ ಪೊಲೀಸರು ಮುಂದಾಗಿದ್ದು, ಈ ವರೆಗೂ ಸುಮಾರು 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮೊದಲ ಅಪರಾಧಕ್ಕೆ 100 ದಂಡ, 2ನೇ ಬಾರಿಯ ಅಪರಾಧಕ್ಕೆ 300 ರೂ ದಂಡ ಮತ್ತು ಮೂರನೇ ಬಾರಿಯೂ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ಸಿಕ್ಕಿ ಬಿದ್ದವರಿಗೆ ದಂಡದೊಂದಿಗೇ ಪರವಾನಗಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಸಂಬಂಧ ಈಗಾಗಲೇ ರಾಜ್ಯಪಾಲರಾದ ಕಿರಣ್ ಬೇಡಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಚರ್ಚೆಯಾಗಿದ್ದು, ನಿಯಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲೆ ಕಿರಣ್ ಬೇಡಿ ಕಿಡಿಕಾರಿದ್ದಾರೆ. 

ಅಲ್ಲದೆ ಈ ಹಿಂದೆ ತಾವೇ ಖುದ್ಧಾಗಿ ರಸ್ತೆಗಳಿದು,ರಿಯಾಲಿಟಿ ಚೆಕ್ ಮಾಡಿದ್ದರು. ಈ ವೇಳೆ ರಸ್ತೆ ಸಂಚಾರ ಹಾಗೂ ಸುರಕ್ಷಿತ ನಿಯಮಗಳನ್ನು ಪಾಲಿಸದ ಸಾರ್ವಜನಿಕರ ವಿರುದ್ಧ ಕಿಡಿಕಾರಿದರು. ಅಲ್ಲದೆ ಮುಂದಿನ ಬಾರಿ ಹೀಗಾದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com