ಫೆ.17ರಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟಿಕೆಟ್ ಬುಕ್ಕಿಂಗ್ ಆರಂಭ

ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಥವಾ ಟ್ರೈನ್‌-18 ನ ದೆಹಲಿ - ವಾರಣಾಸಿ ನಡುವಿನ ಪ್ರಯಾಣಕ್ಕೆ....
ವಂದೇ ಭಾರತ್ ಎಕ್ಸ್ ಪ್ರೆಸ್
ವಂದೇ ಭಾರತ್ ಎಕ್ಸ್ ಪ್ರೆಸ್
ನವದೆಹಲಿ: ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಥವಾ ಟ್ರೈನ್‌-18 ನ ದೆಹಲಿ - ವಾರಣಾಸಿ ನಡುವಿನ ಪ್ರಯಾಣಕ್ಕೆ ಫೆಬ್ರವರಿ 17ರಿಂದ ಸಾರ್ವಜನಿಕರು ಟಿಕೆಟ್ ಬುಕ್ ಮಾಡಬುಹುದು ಎಂದು ರೇಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಾರ್ವಜನಿಕರು ರೈಲು ಟಿಕೆಟ್ ಅನ್ನು ಕೌಂಟರ್ ನಲ್ಲಿ ಹಾಗೂ ಐಆರ್ ಸಿಟಿಸಿ ವೆಬ್ ಸೈಟ್ ನಲ್ಲೂ ಬುಕ್ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಹಾಗೂ ವಾರಣಾಸಿ ನಡುವಿನ ಎಸಿ ಚೇರ್‌ ಕಾರ್‌ ಟಿಕೆಟ್‌ ದರ 1,850 ರೂ. ಹಾಗೂ ಎಕ್ಸಿಕ್ಯುಟಿವ್‌ ಕ್ಲಾಸ್‌ ಟಿಕೆಟ್‌ ದರ 3,520 ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶುಲ್ಕದಲ್ಲಿ ಕ್ಯಾಟರಿಂಗ್‌ ಸೇವಾ ಶುಲ್ಕ ಸಹ ಸೇರಿದೆ. 
ರಿಟರ್ನ್ ಟಿಕೆಟ್ ದರ ಎಸಿ ಚೇರ್‌ ಕಾರ್‌ ಗೆ 1,795 ರೂ. ಮತ್ತು ಎಕ್ಸಿಕ್ಯುಟಿವ್‌ ಕಾರ್‌ ದರವು 3,470 ರೂ. ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15ರಂದು ದೇಶಿ ನಿರ್ಮಿತ ಈ ಸೆಮಿ ಹೈ ಸ್ಪೀಡ್‌ ಟ್ರೈನ್‌ 18 ಗೆ ಚಾಲನೆ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com