ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ

ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರವಿರುವ ಪೆಟ್ಟಿಗೆಗಳನ್ನು ಪಾಲಮ್ ವಿಮಾನ ನಿಲ್ದಾಣಕ್ಕೆ ಸಂಜೆ 7 ಗಂಟೆ ಸುಮಾರಿಗೆ ತರಲಾಯಿತು.
ಪ್ರಧಾನಿ ಮೋದಿಯಿಂದ ಅಂತಿಮ ನಮನ
ಪ್ರಧಾನಿ ಮೋದಿಯಿಂದ ಅಂತಿಮ ನಮನ

ದೆಹಲಿ:  ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರವಿರುವ ಪೆಟ್ಟಿಗೆಗಳನ್ನು  ಪಾಲಮ್ ವಿಮಾನ ನಿಲ್ದಾಣಕ್ಕೆ ಸಂಜೆ 7 ಗಂಟೆ ಸುಮಾರಿಗೆ ತರಲಾಯಿತು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಸೇನಾ ಪಡೆ ಮುಖ್ಯಸ್ಥ ಬಿಪಿನ್‌ ರಾವತ್‌,ವಾಯುಪಡೆ ಹಾಗೂ ನೌಕಾದಳದ ಮುಖ್ಯಸ್ಥರು ಪಾರ್ಥಿವ ಶರೀರವಿದ್ದ ಪೆಟ್ಟಿಗೆಗಳಿಗೆ  ಗೌರವ ಸಲ್ಲಿಸಿದರು.
ಸೇನಾಪಡೆಯ ಗೌರವದ ಬಳಿಕ ನರೇಂದ್ರ ಮೋದಿ, ಎಲ್ಲ ಯೋಧರ ಶವಪೆಟ್ಟಿಗೆಗಳ ಸುತ್ತ  ಪ್ರದಕ್ಷಿಣೆ ಬಂದು, ನಮಸ್ಕರಿಸಿ, ಗೌರವ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com