ಪುಲ್ವಾಮಾ ಉಗ್ರ ದಾಳಿ: ಪಾಕ್ ಗೆ ನೀಡಿದ್ದ 'ವಿಶೇಷ ಆಪ್ತ ರಾಷ್ಟ್ರ' ಸ್ಥಾನಮಾನ ಹಿಂಪಡೆದ ಭಾರತ

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನಿವಾಸದಲ್ಲಿ ನಡೆದ ತುರ್ತು ಸಭೆಯ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನಿವಾಸದಲ್ಲಿ ನಡೆದ ತುರ್ತು ಸಭೆಯ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಅವರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ತಿಳಿಸಿದ ಜೇಟ್ಲಿ ಭಾರತ ಈ ಹಿಂದೆ ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ(Most Favoured Nation status) ಸ್ಥಾನಮಾನವನ್ನು ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ.
"ಪಾಕಿಸ್ತಾನಕ್ಕೆ ನಾವು ಈ ಹಿಂದೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರವೆಂಬ ಸ್ಥಾನಮಾನವನ್ನು ಹಿಂಪಡೆದಿದ್ದೇವೆ.ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೆಗೆದುಕೊಳ್ಳಲಿದೆ" ಜೇಟ್ಲಿ ಹೇಳೀದ್ದಾರೆ.
ಭಯೋತ್ಪಾದನೆಯ ಅರ್ಥವನ್ನು ಪುನರ್ ವ್ಯಾಖ್ಯಾನಿಸಲು ಎಂಇಎಅಂತರರಾಷ್ಟ್ರೀಯ ಸಮುದಾಯದೊಂದಿಗೆ ತೊಡಗಿಸಲಿದೆ
ದೇಶದ ಭದ್ರತೆ ಕಾಪಾಡಿಕೊಳ್ಳುವದನ್ನು ಖಾತರಿ ಪಡಿಸಲು  ಭದ್ರತಾ ಪಡೆಗಳು ಎಲ್ಲಾ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಲಿವೆ ಮತ್ತು ಭಯೋತ್ಪಾದನೆ ದಾಳಿ ನಡೆಸಿದ ಹಾಗೂ ಇದನ್ನು ಬೆಂಬಲಿಸಿದವರು ಭಾರೀ ಬೆಲೆ ತೆರಲಿದ್ದಾರೆ ಎಂದು ಜೇಟ್ಲಿ ನುಡಿದರು.
ಗೃಹ ಸಚಿವ ರಾಜಂತ್ ಸಿಂಗ್ ಇಂದು ಶ್ರೀನಗರಕ್ಕೆ ತರಳಲಿದ್ದು ನಾಳೆ ಅವರು ಹಿಂದಿರುಗಿದ ಬಳಿಕ ಸರ್ವಪಕ್ಷ ಸಭೆ ನಡೆಸಲಾಗುತ್ತದೆ.
ಗುರುವಾರ ಮಧ್ಯಾಹ್ನ 3.15ರ ಸುಮಾರಿಗೆ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಉಗ್ರರು ಸ್ಫೋಟಕ ತುಂಬಿದ್ದ  ವಾಹನವನ್ನು ಸಿಆರ್‌ಪಿಎಫ್ ಯೋಧರ ವಾಹನದ ಮೇಲೆ ನುಗ್ಗಿಸಿ ಭೀಕರ ಆತ್ಮಾಹುತಿ ದಾಳಿ ನಡೆಸಿದ್ದು ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com