ಪುಲ್ವಾಮಾ ದಾಳಿ: ಮಸೂದ್ ಅಝರ್ ಬಂಧನಕ್ಕೆ ಭಾರತ ಒತ್ತಾಯ, ಮೊದಲು ತನಿಖೆಯಾಗಲಿ ಎಂದ ಪಾಪಿ ಪಾಕ್

ಪುಲ್ವಾಮಾ ಭಯೋತ್ಪಾದನಾ ದಾಳಿ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದೆ. ಶುಕ್ರವಾರ ಭಾರತಭಯೋತ್ಪಾದಕ ದಾಳಿ ಹೊಣೆ ಹೊತ್ತ...
ಮಸೂದ್ ಅಝರ್
ಮಸೂದ್ ಅಝರ್
ನವದೆಹಲಿ:  ಪುಲ್ವಾಮಾ ಭಯೋತ್ಪಾದನಾ ದಾಳಿ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದೆ. ಭಯೋತ್ಪಾದಕ ದಾಳಿ ಹೊಣೆ ಹೊತ್ತ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು, ಆ ಉಗ್ರ ಸಂಘಟನೆಯನ್ನು ನಿಷೇಧಿಸಬೇಕು ಎಂದು ಶುಕ್ರವಾರ ಭಾರತ ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಒತ್ತಾಯಿಸಿದೆ.
ಈ ನಡುವೆ ಉಗ್ರ ದಾಳಿಯ ಕುರಿತು ಪಾಕಿಸ್ತಾನ ಸರ್ಕಾರ "ಕಳವಳ" ವ್ಯಕ್ತಪಡಿಸಿದೆ. ಆದರೆ "ತನಿಖೆ ನಡೆಸದೆ" ಘಟನೆಗೆ ಪಾಕಿಸ್ತಾನದ ಜತೆ ಸಂಪರ್ಕಿಸುವುದು ಸರಿಯಲ್ಲ ಎಂದೂ ಹೇಳಿದೆ.
ಪಾಕಿಸ್ತಾನ ಮೂಲದ ಮತ್ತು ವಿಶ್ವಸಂಸ್ಥೆ ಮತ್ತು ಇತರ ರಾಷ್ಟ್ರಗಳಿಂದ ನಿಷೇಧಕ್ಕೊಳಗಾಗಿರುವ ಯೋತ್ಪಾದಕ ಸಂಸ್ಥೆಯಾದ ಜೈಶ್-ಎ-ಮೊಹಮ್ಮದ್ ಈ ಘೋರ ಮತ್ತು ಹೇಯ ಕಾರ್ಯವನ್ನು ಮಾಡಿದೆ ಎಂದು  ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. "ಈ ಭಯೋತ್ಪಾದಕ  ಸಂಘಟನೆ ಪಾಕಿಸ್ತಾನದ ನಿಯಂತ್ರಣದ ಭೂಪ್ರದೇಶಗಳಲ್ಲಿ ತನ್ನ ಭಯೋತ್ಪಾದನೆ  ಯೋಜನೆಯನ್ನು  ಕಾರ್ಯಗತಗೊಳಿಸಲು ಮತ್ತು ವಿಸ್ತರಿಸಲು, ಭಾರತದಲ್ಲಿ ಮತ್ತು ಇತರ ಕಡೆಗಳಲ್ಲಿ ದಾಳಿ ನಡೆಸಲು  ಪಾಕಿಸ್ತಾನ ಸರ್ಕಾರದಿಂದ ಸಂಪೂರ್ಣ ಸಹಕಾರ ಪಡೆಯುತ್ತಿದೆ.ಅಂತರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಝರ್ ಇದರ ನಾಯಕನಾಗಿದ್ದಾನೆ
 "ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳು ತಮ್ಮ ಪ್ರದೇಶದಿಂದ ಕಾರ್ಯ ನಿರ್ವಹಿಸುತ್ತಿರುವುದನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕಿದೆ. ಹಾಗೆಯೇ ಅದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು.ಅಲ್ಲಿನ ಸರ್ಕಾರ ಬೇರೆಡೆಗಳಲ್ಲಿ ಗ್ರ ದಾಳಿ ನಡೆಸಲು ಸಹಕಾರ ನೀಡುವುದನ್ನು ನಾವು ಖಂಡಿಸುತ್ತೇವೆ.ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧಿತ ಉಗ್ರ ಸಂಘಟನೆಗಳಲ್ಲಿ ಜೆಎಂ  ಸಹ ಸೇರಿದೆ. ಮಸೂದ್ ಅಝರ್ಸೇರಿದಂತೆ ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸಲು ನಾವು ಮಾಡಿದ ಪ್ರಸ್ತಾಪವನ್ನು ಬೆಂಬಲಿಸಲು  ಅಂತರಾಷ್ಟ್ರೀಯ ಸಮುದಾಯದ ಎಲ್ಲ ಸದಸ್ಯರಿಗೆ ಮನವಿ ಮಾಡುತ್ತಿದ್ದೇವೆ. ಪಾಕಿಸ್ತಾನ ನಿಯಂತ್ರಿತ ಪ್ರದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಬೇಕು." ಹೇಳಿಕೆ ವಿವರಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕ್ ವಿದೇಶಾಂಗ ಸಚಿವಾಲಯವು ನಿನ್ನೆ ತಡರಾತ್ರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಭಾರತ ಆಕ್ರಮಿತ ಕಾಶ್ಮೀರದ ಪುಲ್ವಾಮಾದಲ್ಲಿನ ಉಗ್ರ ದಾಳಿ ತೀವ್ರ ಕಳವಳದ ವಿಷಯವಾಗಿದೆ. ಪ್ರಪಂಚದಲ್ಲಿ ಎಲ್ಲಿಯಾದರೂ ಹಿಂಸೆಯ ಕೃತ್ಯ ನಡೆದರೂ ನಾವು ಅದನ್ನು ಖಂಡಿಸುತ್ತೇವೆ. ಆದರೆ ತನಿಖೆಗಳಾಗದೆ ಪಾಕಿಸ್ತಾನದ ಮೇಲೆ ವ್ಯಥಾ ಆರೋಪ ಮಾಡಲಾಗುತ್ತಿದ್ದು ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ.ಭಾರತೀಯ ಮಾಧ್ಯಮ ಮತ್ತು ಸರ್ಕಾರದಲಿನ ಯಾವುದೇ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ." ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com