ಪುಲ್ವಾಮಾ ಉಗ್ರರ ದಾಳಿಗೆ ಭದ್ರತಾ ಲೋಪವೇ ಕಾರಣ: ರಾಜ್ಯಪಾಲ ಸತ್ಯಪಾಲ್ ಮಲಿಕ್

ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರತಾ ಲೋಪವಾಗಿರುವುದು ನಿಜ ಎಂದು ಜಮ್ಮು ಮತ್ತು ಕಾಶ್ಮೀರ ...
ಸತ್ಯಪಾಲ್ ಮಲಿಕ್
ಸತ್ಯಪಾಲ್ ಮಲಿಕ್
ಶ್ರೀನಗರ ಮತ್ತು ನವದೆಹಲಿ: ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರತಾ ಲೋಪವಾಗಿರುವುದು ನಿಜ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಒಪ್ಪಿಕೊಂಡಿದ್ದಾರೆ.
ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ್ದರು, ಸುಮಾರು 78 ಬಸ್ ಗಳಲ್ಲಿ 2500 ಮಂದಿ ಯೋಧರು ಹಲವು ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದರು, ಆದರೆ ಹಾಗೆ ಒಟ್ಟಾಗಿ ಅಷ್ಟು ಮಂದಿ ಪ್ರಯಾಣಿಸಬಾರದಿತ್ತು, ಒಂದು ವೇಳೆ ಪ್ರಯಾಣಿಸಲೇ ಬೇಕಿದ್ದರೇ ವೇಗವಾಗಿ ಸಂಚರಿಸಬೇಕಿತ್ತು ಎಂದು ಹೇಳಿದ್ದಾರೆ.
ಹೆದ್ದಾರಿಯಲ್ಲಿ ಸರಿಯಾದ ಸೆಕ್ಯೂರಿಟಿ ಚೆಕ್ ಮಾಡಬೇಕಿತ್ತು, ಸರಿಯಾದ ಭದ್ರತಾ ಕಣ್ಗಾವಲು ನಡೆಸಬೇಕಿತ್ತು, ಹೀಗೆ ಮಾಡಿದ್ದರೇ ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದು ಹೇಳಿದ್ದಾರೆ.
ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ, ಈಗಲಾದರೂ ಭದ್ರತಾ ಪಡೆಗಳು ಒಟ್ಟಾಗಿ ಕುಳಿತು ತೆಗೆದುಕೊಂಡ ಕ್ರಮಗಳ ಬಗ್ಗೆ ವಿಶ್ಲೇಷಣೆ ನಡೆಸಬೇಕು ಹಾಗೂ ತಮ್ಮ ಲೋಪದೋಷಗಳನ್ನು ಸರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಕರಣದ ನಂತರ ಹಲವು ಪ್ರಶ್ನೆಗಳು ಎದ್ದಿವೆ, ಜೈಶ್-ಇ -ಮೊಹಮದ್ ಉಗ್ರರು ಹಲವು ಬಾರಿ ಎಚ್ಚರಿಕೆ ನೀಡಿದ್ದರು ಎಂಬ ವರದಿಗಳು ಬಂದಿವೆ, ಅದನ್ನು ಭದ್ರತಾ ಪಡೆಗಳು ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com