ಹುತಾತ್ಮ ಯೋಧರ ಶವಪೆಟ್ಟಿಗೆಗೆ ಹೆಗಲು ಕೊಟ್ಟ ಗೃಹ ಸಚಿವ ರಾಜನಾಥ್ ಸಿಂಗ್, ಡಿಜಿಪಿ ದಿಲ್ಬಾಗ್ ಸಿಂಗ್

ಪುಲ್ವಾಮ ದಾಳಿಯಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರವಿದ್ದ ಪೆಟ್ಟಿಗೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಬುದ್ ಗಾಂನಲ್ಲಿಂದು ಹೆಗಲು ನೀಡಿದರು.
ಯೋಧರ ಶವಪೆಟ್ಟಿಗೆ ಹೆಗಲು ನೀಡಿರುವ ರಾಜನಾಥ್ ಸಿಂಗ್
ಯೋಧರ ಶವಪೆಟ್ಟಿಗೆ ಹೆಗಲು ನೀಡಿರುವ ರಾಜನಾಥ್ ಸಿಂಗ್

ಜಮ್ಮು-ಕಾಶ್ಮೀರ: ಪುಲ್ವಾಮ ದಾಳಿಯಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ  ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರವಿದ್ದ ಪೆಟ್ಟಿಗೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಜಿಪಿ ದಿಲ್ಬಾಗ್ ಸಿಂಗ್  ಅವರು ಬುದ್ ಗಾಂನಲ್ಲಿಂದು  ಹೆಗಲು ನೀಡಿದರು.

ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಮತ್ತು ಸೇನಾ ಉತ್ತರ ವಲಯದ ಕಮಾಂಡ್ ಚೀಪ್  ಲೆಪ್ಟಿನೆಂಟ್ ಜನರಲ್ ರಣಬೀರ್ ಸಿಂಗ್  ಕೂಡಾ  ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಹುತಾತ್ಮರಾಧ 41 ಸಿಆರ್ ಪಿಎಫ್  ಯೋಧರ ಪಾರ್ಥಿವ ಶರೀರರಕ್ಕೆ ಶ್ರದ್ದಾಂಜಲಿ ಸಲ್ಲಿಸಿದ ನಂತರ ಅವರ ಸ್ವಗ್ರಾಮಕ್ಕೆ ರವಾನಿಸಲಾಯಿತು.

ಶ್ರದಾಂಜಲಿ ಸಲ್ಲಿಸುವ ವೇಳೆ  ಸಿಆರ್ ಪಿಎಫ್ ಶಿಬಿರದ ಬಳಿ ವೀರ ಜವಾನ್ ಅಮರ್ ರಹೇ ಎಂಬ ಘೋಷಣೆಗಳು ಮುಗಿಲುಮುಟ್ಟಿತು. ಇದಕ್ಕೂ ಮುನ್ನ ಶವಪೆಟ್ಟಿಗೆ ತ್ರಿವರ್ಣ ಧ್ವಜ ಹೂದಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ನಂತರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ , ಸಿಆರ್ ಪಿಎಫ್ ನಿರ್ದೇಶಕ ಆರ್. ಆರ್. ಭಟ್ನಾಗರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ಕಾಶ್ಮೀರಕ್ಕೆ ತೆರಳಿದರು. ಶ್ರೀನಗರದಲ್ಲಿ 92 ಬೇಸ್ ಆಸ್ಪತ್ರೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು ಅವರು  ಭೇಟಿ ಮಾಡಿದರು.
ನಂತರ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ವೀರ ಸಿಆರ್ ಪಿಎಫ್ ಯೋಧರ  ಅಪ್ರತಿಮ ತ್ಯಾಗವನ್ನು ದೇಶ ಮರೆಯುವುದಿಲ್ಲ. ಪುಲ್ವಾಮಾದಲ್ಲಿ ಹುತಾತ್ಮಾದ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
 
ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಶ್ರೀನಗರ ವಿಮಾನ ನಿಲ್ದಾಣಕ್ಕೆ ರವಾನಿಸಲು ಟ್ರಕ್ ನಲ್ಲಿ ಇರಿಸುವವರೆಗೂ ಗಣ್ಯರು ನಿಶಬ್ಧವಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಲ್ವಾಮಾ ಜಿಲ್ಲೆಯಲ್ಲಿ ಜೈಸ್ -ಇ- ಮೊಹಮ್ಮದ್ ಸಂಘಟನೆಯ ಸೂಸೈಡ್ ಬಾಂಬರ್  ಸೈನಿಕರಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದ ಪರಿಣಾಮ 40 ಸಿಆರ್ ಪಿಎಫ್  ಸಿಬ್ಬಂದಿ ಹಾಗೂ ಐದು ಮಂದಿ ಗುರುವಾರ  ಹುತಾತ್ಮರಾಗಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com