ಐಎಸ್ಐ ಜತೆ ನಂಟು: ಕಾಶ್ಮೀರಿ ಪ್ರತ್ಯೇಕವಾದಿಗಳ ಭದ್ರತೆ ಹಿಂಪಡೆಯಲು ಮುಂದಾದ ಸರ್ಕಾರ

ಕಾಶ್ಮೀರದ ಪ್ರತ್ಯೇಕವಾದಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೆ ನೀಡಿದ್ದ ಭದ್ರತೆಯನ್ನು...
ಪ್ರತ್ಯೇಕವಾದಿ ನಾಯಕ ಸಯೀದ್ ಅಲಿ ಶಾ ಗಿಲಾನಿ
ಪ್ರತ್ಯೇಕವಾದಿ ನಾಯಕ ಸಯೀದ್ ಅಲಿ ಶಾ ಗಿಲಾನಿ
ಶ್ರೀನಗರ: ಕಾಶ್ಮೀರದ ಪ್ರತ್ಯೇಕವಾದಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಕಾಶ್ಮೀರ ಗೃಹ ಕಾರ್ಯದರ್ಶಿಗಳು  ಪ್ರತ್ಯೇಕವಾದಿಗಳ ಭದ್ರತೆಯನ್ನು ಪರೀಶಿಲಿಸುತ್ತಿದ್ದು, ಐಎಸ್ ಐ ಜೊತೆಗಿನ ನಂಟು ಪರಿಶೀಲಿಸಿದ ಬಳಿಕ ಭದ್ರತೆ ಹಿಂಪಡೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಕಾಶ್ಮೀರ ಪ್ರತ್ಯೇಕವಾದಿಗಳು ಐಎಸ್ ಐ ಜತೆ ನಂಟು ಹೊಂದಿರುವ ಸಾಧ್ಯತೆ ಇದ್ದು, ಅವರಿಗೆ ನೀಡಿದ ಭದ್ರತೆಯನ್ನು ಪರಿಶೀಲಿಸಿ  ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅಲ್ಲದೆ ಪಾಕ್ ನಿಂದ ಹಣಪಡೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು, ಇಂತಹವರಿಗೆ ಕಲ್ಪಿಸಲಾಗುತ್ತಿರುವ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com