ಕಣ್ಣೆದುರೇ ಯೋಧರು ಹುತಾತ್ಮರಾಗಿದ್ದನ್ನು ಕಂಡ ಪಶ್ಚಿಮ ಬಂಗಾಳದ ಜವಾನ!

ಮೊನ್ನೆ ಪ್ರೇಮಿಗಳ ದಿನ ಫೆಬ್ರವರಿ 14ರಂದು ಸಾಯಂಕಾಲ ಕಾಶ್ಮೀರದ ಪುಲ್ವಾಮಾದ ಸ್ಫೋಟದ ...
ಆತ್ಮಾಹುತಿ ದಾಳಿ ನಡೆದ ಸ್ಥಳದಲ್ಲಿನ ದೃಶ್ಯ
ಆತ್ಮಾಹುತಿ ದಾಳಿ ನಡೆದ ಸ್ಥಳದಲ್ಲಿನ ದೃಶ್ಯ
ಕೋಲ್ಕತ್ತಾ: ಮೊನ್ನೆ ಪ್ರೇಮಿಗಳ ದಿನ ಫೆಬ್ರವರಿ 14ರಂದು ಸಾಯಂಕಾಲ ಕಾಶ್ಮೀರದ ಪುಲ್ವಾಮಾದ ಸ್ಫೋಟದ ಸ್ಥಳದಿಂದ ತನ್ನ ಪತಿ ಸಿಆರ್ ಪಿಎಫ್ ಜವಾನಾ ಮಂಗಲ್ ಹೆಂಬ್ರಮ್ ಅವರ ಧ್ವನಿ ಕೇಳಿದ ಪತ್ನಿ ಶಂಕರಿ ಹೆಂಬ್ರಮ್ ದುಃಖದ ಕಟ್ಟೆಯೊಡೆದು ಕುಸಿದು ಬಿದ್ದರು.
ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೊರಾದಲ್ಲಿ ಕಾರು ಬಾಂಬ್ ಆತ್ಮಹತ್ಯಾ ದಾಳಿಗೆ ತುತ್ತಾದ ಸೇನಾ ಬಸ್ಸಿನ ಹಿಂದಿನ ವಾಹನದಲ್ಲಿ ಪಶ್ಚಿಮ ಬಂಗಾಳದ ಮೇದಿನೀಪುರ ಪಟ್ಟಣದ ನಿವಾಸಿ 115ನೇ ಬೆಟಾಲಿಯನ್ ಜವಾನ ಮಂಗಲ್ ಹೆಂಬ್ರಮ್ ಇದ್ದರು.
ಎಲ್ಲವೂ ನನ್ನ ಕಣ್ಣೆದುರೇ ನಡೆದುಹೋಯಿತು ಎಂದು ಪತ್ನಿಗೆ ವಿವರಿಸಿದರು ಜವಾನಾ.
ದುರಾದೃಷ್ಟದ ಬಸ್ಸಿನಲ್ಲಿ ಮಂಗಲ್ ಹೆಂಬ್ರಮ್ ಪ್ರಯಾಣಿಸುವುದು ತಪ್ಪಿಹೋಗಿರುವುದರಿಂದ ಬದುಕುಳಿದರು. ಘಟನೆಯಲ್ಲಿ ಹೆಂಬ್ರಮ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. 40 ದಿನಗಳ ರಜೆ ಮುಗಿಸಿಕೊಂಡು ಬಂದು ಹೆಂಬ್ರಮ್ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದರು.
ಜವಾನ ಮಂಗಲ್ ಹೆಂಬ್ರಮ್ 
ಟಿವಿಯಲ್ಲಿ ಸುದ್ದಿ ಕೇಳಿ ನನ್ನ ತಲೆಯೇ ಸುತ್ತಿಬಂದಂತಾಯಿತು. ಆಗ ತಕ್ಷಣ ಪತಿಯವರೇ ಕರೆ ಮಾಡಿ ಆರಾಮಾಗಿದ್ದೇನೆ ಎಂದರು. ನಂತರ ಮೂರು ಪುತ್ರಿಯರೊಂದಿಗೆ ಮಾತನಾಡಿದ ಮೇಲೆಯೇ ನಮಗೆ ಸಮಾಧಾನವಾಗಿದ್ದು, ದೇವರ ದಯೆಯಿಂದ ನಮ್ಮ ಪತಿ ಬದುಕುಳಿದರು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com