ಬರ್ಖಾ ದತ್ ಗೆ ಅಶ್ಲೀಲ ಸಂದೇಶ, ಬೆದರಿಕೆ: ದ್ವೇಶಿಸಬೇಡಿ, ಪ್ರೀತಿ, ಶಾಂತಿಯಿಂದ ಬಗೆಹರಿಸಿಕೊಳ್ಳಿ-ಟ್ವೀಟಿಗರ ಸಲಹೆ

ಪತ್ರಕರ್ತೆ, ಮಾನವ ಹಕ್ಕುಗಳಿಗಾಗಿ ಧ್ವನಿ ಎತ್ತುವ ಪತ್ರಕರ್ತೆ ಬರ್ಖಾ ದತ್ ಗೆ ವಾಟ್ಸ್ ಅಪ್ ನಲ್ಲಿ ಕೆಲವರು ಅಶ್ಲೀಲ ವಾಟ್ಸ್ ಆಪ್ ಸಂದೇಶ ಹಾಗೂ ಬೆದರಿಕೆ ಬರುತ್ತಿದೆ.
ಬರ್ಖಾ ದತ್
ಬರ್ಖಾ ದತ್
ನವದೆಹಲಿ: ಪತ್ರಕರ್ತೆ, ಮಾನವ ಹಕ್ಕುಗಳಿಗಾಗಿ ಧ್ವನಿ ಎತ್ತುವ ಪತ್ರಕರ್ತೆ ಬರ್ಖಾ ದತ್ ಗೆ ವಾಟ್ಸ್ ಅಪ್ ನಲ್ಲಿ ಕೆಲವರು ಅಶ್ಲೀಲ ವಾಟ್ಸ್ ಆಪ್ ಸಂದೇಶ  ಹಾಗೂ ಬೆದರಿಕೆ ಬರುತ್ತಿದೆ. 
ಪುಲ್ವಾಮ ದಾಳಿಯ ಬಳಿಕ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಬರ್ಖಾ ದತ್ " ಮನನೊಂದ, ಅಭದ್ರತೆಯ ಭಾವ ಎದುರಿಸುತ್ತಿರುವ ಯಾವುದೇ ಕಾಶ್ಮೀರಿಗಳ ಸಹಾಯಕ್ಕಾಗಿ ತಮ್ಮ ಮನೆಯ ಬಾಗಿಲು ಎಂದಿಗೂ ತೆರೆದಿರುತ್ತದೆ" ಎಂದು ಹೇಳಿದ್ದರು. ಇದಾದ ಬೆನ್ನಲ್ಲೇ ಬರ್ಖಾ ದತ್ ಅವರ ಫೋನ್ ನಂಬರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು, ಕೆಲವರು ಬರ್ಖಾ ದತ್ ಅವರ ವಾಟ್ಸ್ ಆಪ್ ಗೆ ಅಶ್ಲೀಲ ಫೋಟೊ, ಸಂದೇಶ ಕಳಿಸಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೇ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ತಮಗೆ ಬರುತ್ತಿದ್ದ ಸಂದೇಶದ ಬಗ್ಗೆ ಬರ್ಖಾದತ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಬರ್ಖಾದತ್ ಗೆ ಬೆದರಿಕೆ ಬಂದಿರುವುದನ್ನು ಹಲವರು ಖಂಡಿಸಿದ್ದರೆ, ಇನ್ನೂ ಕೆಲವರು "ಅಶ್ಲೀಲ ಸಂದೇಶ, ಬೆದರಿಕೆ ಹಾಕಿದವರನ್ನು ಕ್ಷಮಿಸಿಬಿಡಿ, ಶಿಕ್ಷೆಗೆ ಆಗ್ರಹಿಸಬೇಡಿ, ದ್ವೇಶ ಮಾಡಬೇಡಿ, ಶಾಂತಿಯುತವಾಗಿ, ಪ್ರೀತಿಯಿಂದ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ವ್ಯಂಗ್ಯ ಧಾಟಿಯಲ್ಲಿ ಸಲಹೆ ನೀಡಿದ್ದಾರೆ. 
ಇನ್ನೂ ಕೆಲವರು ನಿಮಗೆ ಅಶ್ಲೀಲ ಸಂದೇಶ ಕಳಿಸುವವರನ್ನು ದ್ವೇಶಿಸಬೇಡಿ, ಪ್ರೀತಿಯಿಂದ ಶಾಂತಿಯಿಂದ ಮಾತನಾಡಿ, ನೀವು ಶಿಕ್ಷೆಗೆ ಆಗ್ರಹಿಸಿದಲ್ಲಿ ಮತ್ತಷ್ಟು ಪ್ರಕ್ಷುಬ್ಧತೆ ಉಂಟಾಗುತ್ತದೆ. ಸಂದೇಶ ಕಳಿಸಿದವರಿಗೆ ಶಿಕ್ಷೆಗೆ ಆಗ್ರಹಿಸಿ ದ್ವೇಷಿಸಿದರೆ, ಈ ದ್ವೇಶದ ಸರಣಿ ಹೀಗೆ ಮುಂದುವರೆದರೆ ಕೊನೆ ಎಲ್ಲಿರುತ್ತದೆ ಎಂದು ಕೇಳಿದ್ದಾರೆ. 
ಬರ್ಖಾ ದತ್ ಅವರಿಗೆ ಬಂದಿರುವ ಸಂದೇಶಗಳ ಬಗ್ಗೆ ತನಿಖೆ ನಡೆಸುವುದಾಗಿ ದೆಹಲಿ ಪೊಲೀಸ್ ಅಧಿಕಾರಿ ಮಧುರ್ ವರ್ಮಾ ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com