'ಫೇಕ್ ನ್ಯೂಸ್' ಅಬ್ಬರ: ಇದು ಪುಲ್ವಾಮ ದಾಳಿ ವಿಡಿಯೋ ಅಲ್ಲ, ಇರಾನ್ ಸ್ಫೋಟದ ವಿಡಿಯೋ!

ಪುಲ್ವಾಮ ದಾಳಿ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮ ದಾಳಿಯ ಭೀಕರ ವಿಡಿಯೋ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಅಪ್ಲೋಡ್ ಆಗಿ ವೈರಲ್ ಆಗಿತ್ತು. ಆದರೆ ಈಗ ಈ ವಿಡಿಯೋದ ಅಸಲೀಯತ್ತು ಬಹಿರಂಗವಾಗಿದ್ದು, ಇದು ನಕಲಿ ವಿಡಿಯೋ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಳೆದ ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 40ಕ್ಕೂ ಅಧಿಕ  ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮ ದಾಳಿಯ ಭೀಕರ ವಿಡಿಯೋ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಅಪ್ಲೋಡ್ ಆಗಿ ವೈರಲ್ ಆಗಿತ್ತು. ಆದರೆ ಈಗ ಈ ವಿಡಿಯೋದ ಅಸಲೀಯತ್ತು ಬಹಿರಂಗವಾಗಿದ್ದು, ಇದು ನಕಲಿ ವಿಡಿಯೋ ಎಂದು ತಿಳಿದುಬಂದಿದೆ.
ಹೌದು.. ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿ ವೈರಲ್ ಆಗಿರುವ ಪುಲ್ವಾಮ ಉಗ್ರ ದಾಳಿಯ ವಿಡಿಯೋ ನಕಲಿ ವಿಡಿಯೊ ಎಂದು ಸಾಬೀತಾಗಿದ್ದು, ಇದರ ಮೂಲ ಕೂಡ ಪತ್ತೆಯಾಗಿದೆ. ಅಸಲಿಗೆ ಇದು ಪುಲ್ವಾಮ ಉಗ್ರ ದಾಳಿಯ ವಿಡಿಯೋ ಅಲ್ಲ. ಬದಲಿಗೆ ಇರಾನ್ ನಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯ ವಿಡಿಯೋ ಎಂದು ತಿಳಿದುಬಂದಿದೆ.
ಸುಮಾರು 30 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಸೇನಾವಾಹನಗಳತ್ತ ಕಾರೊಂದು ಆಗಮಿಸುತ್ತಲೇ ಕಾರು ಸ್ಫೋಟಗೊಂಡು ಸೇನಾವಾಹನ ಛಿದ್ರವಾಗುತ್ತದೆ. ಇಂತಹುದೇ ಸನ್ನಿವೇಶ ಪುಲ್ವಾಮಾದಲ್ಲೂ ಸೃಷ್ಟಿಯಾಗಿದ್ದು, ಇದೇ ಕಾರಣಕ್ಕೆ ಕಿಡಿಗೇಡಿಗಳು ಇದನ್ನೇ ಪುಲ್ವಾಮ ದಾಳಿಯ ವಿಡಿಯೋ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
2007ರ ಸೆಪ್ಟೆಂಬರ್ 2ರಂದು ಈ ದಾಳಿ ನಡೆದಿದ್ದು, ಇದೇ ವಿಡಿಯೋವನ್ನು ಪುಲ್ವಾಮ ದಾಳಿಯ ವಿಡಿಯೊ ಎಂದು ಹೇಳಿ ಕಿಡಿಗೇಡಿಗಳು ಅಪ್ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com