ವೇದಾಂತ ಸ್ಟೆರಿಲೈಟ್ ಪ್ರಕರಣ: ಎನ್ ಜಿಟಿ ಆದೇಶ ಸುಪ್ರೀಂ ನಲ್ಲಿ ವಜಾ

ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಸ್ಟೆರಿಲೈಟ್ ಕಾಪರ್ ಘಟಕವನ್ನು ಮರುಪ್ರಾರಂಭ ಮಾಡುವ ಎನ್ ಜಿಟಿ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ವೇದಾಂತ ಸ್ಟೆರಿಲೈಟ್ ಪ್ರಕರಣ:  ಎನ್ ಜಿಟಿ ಆದೇಶ ಸುಪ್ರೀಂ ನಲ್ಲಿ ವಜಾ
ವೇದಾಂತ ಸ್ಟೆರಿಲೈಟ್ ಪ್ರಕರಣ: ಎನ್ ಜಿಟಿ ಆದೇಶ ಸುಪ್ರೀಂ ನಲ್ಲಿ ವಜಾ
ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಸ್ಟೆರಿಲೈಟ್ ಕಾಪರ್ ಘಟಕವನ್ನು ಮರುಪ್ರಾರಂಭ ಮಾಡುವ ಎನ್ ಜಿಟಿ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 
ತಮಿಳುನಾಡು ಸರ್ಕಾರದ ಆದೇಶದ ವಿರುದ್ಧ ವೇದಆಂತ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಎನ್ ಜಿಟಿಗೆ ವ್ಯಾಪ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ವೇದಾಂತ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಬಹುದೆಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. 
ವೇದಾಂತ ಸ್ಟೆರಿಲೈಟ್ ಕಾಪರ್ ಘಟಕವನ್ನು ಮರುಸ್ಥಾಪಿಸುವುದಕ್ಕೆ ಆದೇಶ ನೀಡಿದ್ದ ಎನ್ ಜಿಟಿ ಆದೇಶವನ್ನು ತಮಿಳುನಾಡು ಸರ್ಕಾರ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ಸ್ಟೆರಿಲೈಟ್ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ್ದ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com