ಎನ್`ಕೌಂಟರ್ ಆಗಿದೆ ಎಂದಾಕ್ಷಣ ಪರಿಸ್ಥಿತಿ ಕೈ ಮೀರಿದೆ ಎಂದರ್ಥವಲ್ಲ: ವಿಕೆ ಸಿಂಗ್

ಈಗಲೂ ಕಾಶ್ಮೀರದಲ್ಲಿ ಭಾರತೀಯ ಸೇನೆ ಬಲಿಷ್ಠವಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ಕೇಂದ್ರ ಸಚಿವ ಹಾಗೂ ನಿವೃತ್ತ ಸೇನಾಮುಖ್ಯಸ್ಥ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.
ಕೇಂದ್ರ ಸಚಿವ ವಿಕೆ ಸಿಂಗ್
ಕೇಂದ್ರ ಸಚಿವ ವಿಕೆ ಸಿಂಗ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್`ಕೌಂಟರ್ ನಲ್ಲಿ ಸೈನಿಕರು ಹುತಾತ್ಮರಾದ ಮಾತ್ರಕ್ಕೆ ಕಣಿವೆ ರಾಜ್ಯದಲ್ಲಿ ಸೇನೆಯ ಬಲ ಕುಂಠಿತವಾಗಿದೆ ಎಂಬುದು ಸರಿಯಲ್ಲ. ಈಗಲೂ ಕಾಶ್ಮೀರದಲ್ಲಿ ಭಾರತೀಯ ಸೇನೆ ಬಲಿಷ್ಠವಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ಕೇಂದ್ರ ಸಚಿವ ಹಾಗೂ ನಿವೃತ್ತ ಸೇನಾಮುಖ್ಯಸ್ಥ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಕೆ ಸಿಂಗ್ ಅವರು, ಕಾಶ್ಮೀರ ಸಮಸ್ಯೆ ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ. ಕಾಶ್ಮೀರದಲ್ಲಿ ಅಘೋಷಿತ ಪ್ರಾಕ್ಸಿ ಯುದ್ಧ ಚಾಲ್ತಿಯಲ್ಲಿದ್ದು, ಕೇವಲ ಒಂದೆರಡು ಘಟನೆಗಳಿಂದ ಯಾವುದೇ ಕಾರಣಕ್ಕೂ ಯಶಸ್ಸು ಮತ್ತು ವೈಫಲ್ಯದ ಕುರಿತು ನಿರ್ಧರಿಸಬಾರದು. ಹೌದು ಎನ್`ಕೌಂಟರ್ ನಲ್ಲಿ ನಮ್ಮ ಮೂವರು ಯೋಧರು ವೀರ ಮರಣವನ್ನಪ್ಪಿದ್ದಾರೆ. ಅಷ್ಟು ಮಾತ್ರಕ್ಕೇ ಅಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಸೇನೆಯ ನಿಯಂತ್ರಣದಲ್ಲಿಲ್ಲ ಎಂದಲ್ಲ ಎಂದು ಹೇಳಿದರು.
ಅಂತೆಯೇ ಉತ್ತರ ಕಾಶ್ಮೀರದಲ್ಲಿ 2005 ರಿಂದ 2012ರವರೆಗೂ ಶಾಂತಿಯುತ ಪರಿಸ್ಥಿತಿ ಹೇಳಿಕೊಳ್ಳುವಂತೆ ಇತ್ತು. ಆದರೆ 2012ರ ಬಳಿಕ ಏನಾಯ್ತು ಎಂದು ಯಾರಾದರೂ ಚರ್ಚೆ ಮಾಡೀದ್ದೀರಾ.. ಈ ಎಲ್ಲಾ ಘಟನೆಗಳು ಯಾಕಾಗುತ್ತಿವೆ ಎಂದು ಯೊಚಿಸಿದ್ದೀರಾ ಎಂದು ವಿಕೆ ಸಿಂಗ್ ಪ್ರಶ್ನಿಸಿದರು. ಇಲ್ಲಿನ ಕೆಲವರಿಂದಾಗಿ ಕಣಿವೆ ರಾಜ್ಯದಲ್ಲಿ ಉಗ್ರರಿಗೆ ಉತ್ತೇಜನ ಸಿಗುತ್ತಿದೆ ಎಂದು ವಿಕೆ ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com