ಮಾದಕ ವ್ಯಸನ ದೇಶವಿರೋಧಿ ಶಕ್ತಿಗಳಿಗೆ ಸಹಕಾರಿ: ಮೋದಿ

ಮಾದಕ ವ್ಯಸನದಿಂದ ದೂರವಿರುವಂತೆ ಪ್ರಧಾನಿ ನರೇಂದ್ರ ದೇಶದ ಯುವಜನತೆಗೆ ಕರೆ ನೀಡಿದ್ದಾರೆ.

Published: 19th February 2019 12:00 PM  |   Last Updated: 19th February 2019 11:22 AM   |  A+A-


Drug addiction helps anti-national forces: Modi

ಮಾದಕ ವ್ಯಸನ ದೇಶವಿರೋಧಿ ಶಕ್ತಿಗಳಿಗೆ ಸಹಕಾರಿ: ಮೋದಿ

Posted By : SBV SBV
Source : Online Desk
ಚಂಡೀಗಢ: ಮಾದಕ ವ್ಯಸನದಿಂದ ದೂರವಿರುವಂತೆ ಪ್ರಧಾನಿ ನರೇಂದ್ರ ದೇಶದ ಯುವಜನತೆಗೆ ಕರೆ ನೀಡಿದ್ದಾರೆ. 

ಮಾದಕ ವ್ಯಸನದಿಂದಾಗಿ ಮನಸ್ಸು ಮತ್ತು ಬುದ್ಧಿ ಎರಡೂ ಹಾಳಾಗುವುದಷ್ಟೇ ಅಲ್ಲದೇ ದೇಶದ್ರೋಹಿಗಳ ಶಕ್ತಿಗಳಿಗೂ ನೆರವಾಗಲಿದೆ ಎಂದು ಮೋದಿ ಎಚ್ಚರಿಸಿದ್ದಾರೆ. ಹರ್ಯಾಣದ ಹಿಸಾರ್ ನಗರದಲ್ಲಿ ಆರ್ಟ್ ಆಫ್ ಲಿವಿಂಗ್ ನಿಂದ ಆಯೋಜಿಸಲಾಗಿದ್ದ ಡ್ರಗ್ ಮುಕ್ತ ಭಾರತ ಅಭಿಯಾನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಡ್ರಗ್ಸ್ ವ್ಯಸನಿಗಳಾದವರು ದೇಶದ್ರೋಹಿ, ಸಮಾಜಘಾತುಕ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಡ್ರಗ್ಸ್ ವ್ಯಾಪಾರಿಗಳು ಯುವಶಕ್ತಿಯನ್ನು ದುರ್ಬಲಗೊಳಿಸುತ್ತದೆ. ದೇಶದ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ ಎಂದು ಎಚ್ಚರಿಸಿದ್ದಾರೆ. 

ಇನ್ನು ಇದೇ ವೇಳೆ ಡ್ರಗ್ಸ್ ಸಂತ್ರಸ್ತರೊಂದಿಗೆ ಜನತೆ ಸೂಕ್ಷ್ಮವಾಗಿ ವರ್ತಿಸಬೇಕು, ಅವರನ್ನು ಸರಿದಾರಿಗೆ ತರಲು ಸಹಕರಿಸಬೇಕೆಂದು ಕರೆ ನೀಡಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp