ಡೀಸೆಲ್‌ನಿಂದ ಇಲೆಕ್ಟ್ರಿಕ್‌ ಪರಿವರ್ತಿತ ವಿಶ್ವದ ಮೊದಲ ಲೋಕೊಮೋಟಿವ್ ಗೆ ಮೋದಿ ಚಾಲನೆ

ಉತ್ತರ ಪ್ರದೇಶದ ವಾರಾಣಸಿಯಲ್ಲಿಂದು ಡೀಸೆಲ್ ನಿಂದ ವಿದ್ಯುತ್ತಿಗೆ ಪರಿವರ್ತಿಸಲ್ಪಟ್ಟ ಇಲೆಕ್ಟ್ರಿಕ್‌ ಲೋಕೊಮೋಟಿವ್ ಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಸಿರು ನಿಶಾನೆ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಸಿರು ನಿಶಾನೆ

ವಾರಾಣಸಿ : ಉತ್ತರ ಪ್ರದೇಶದ ವಾರಾಣಸಿಯ ಡೀಸೆಲ್ ಲೋಕೊಮೋಟಿವ್ಸ್ ವರ್ಕ್ಸ್ (ಡಿಎಲ್ ಡಬ್ಯ್ಲೂ)ನಲ್ಲಿಂದು ಡೀಸೆಲ್ ನಿಂದ  ವಿದ್ಯುತ್ತಿಗೆ  ಪರಿವರ್ತಿಸಲ್ಪಟ್ಟ ಇಲೆಕ್ಟ್ರಿಕ್‌ ಲೋಕೊಮೋಟಿವ್ ಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.

ದೇಶದಲ್ಲಿನ ಬ್ರಾಡ್‌ ಗೇಜ್‌ ನೆಟ್‌ವರ್ಕನ್ನು ಸಂಪೂರ್ಣವಾಗಿ ವಿದ್ಯುದೀಕರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೇ ಇದೇ ಮೊದಲ ಬಾರಿಗೆ ಡೀಸಿಲ್‌ ಲೋಕೊಮೋಟಿವ್  ಅನ್ನು ವಿದ್ಯುತ್ತಿಗೆ ಪರಿವರ್ತಿಸಿದೆ.

ವಾರಾಣಸಿಗೆ ಬಂದ ತಕ್ಷಣ ಪ್ರಧಾನಿ ಮೋದಿ ಅವರು ಮೊತ್ತ ಮೊದಲಾಗಿ ಡಿಎಲ್‌ಡಬ್ಲ್ಯು ತಲುಪಿ ಇಲೆಕ್ಟ್ರಿಲ್‌ ಲೋಕೊಮೋಟಿವ್ ಗೆ ಹಸಿರು ನಿಶಾನೆ ತೋರಿದರು. ಬಳಿಕ ಇಂಜಿನ್‌ ಒಳಭಾಗವನ್ನು ತಾವೇ ಖುದ್ದು ಪರಿಶೀಲಿಸಿದರು.

2017ರ ಡಿ.22ರಂದು ದೇಶದ ಮೊತ್ತ ಮೊದಲ ಈ ಪರಿವರ್ತನೆ ಯೋಜನೆಯನ್ನು ಆರಂಭಿಸಲಾಗಿತ್ತು. ಕೇವಲ 69 ದಿನಗಳ ಒಳಗೆ ಮೊದಲ ಪರಿವರ್ತಿತ ಲೋಕೊಮೋಟಿವ್  ಇಂಜಿನ್‌ ಸಿದ್ಧಗೊಂಡಿರುವುದು ಒಂದು ಸಾಧನೆಯೇ ಆಗಿದೆ.

ನಂತರ ಪ್ರಧಾನಿ ಮೋದಿ  ಸಂತ ರವಿದಾಸ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿ ಚಳವಳಿಯ ಲೇಖಕನ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರಲ್ಲದೇ, ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com