ಪಂಜಾಬ್ ಬಜೆಟ್: ಪೆಟ್ರೋಲ್​ ಬೆಲೆ ಲೀಟರ್ ಗೆ 5 ರು. ಡೀಸೆಲ್‌ 1 ರು. ಇಳಿಕೆ

ಪಂಜಾಬ್ ಸರ್ಕಾರ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೋಮವಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಪೆಟ್ರೋಲ್ ಬೆಲೆ...

Published: 19th February 2019 12:00 PM  |   Last Updated: 19th February 2019 11:44 AM   |  A+A-


Punjab Govt cuts petrol price by Rs 5, diesel by Re 1

ಸಾಂದರ್ಭಿಕ ಚಿತ್ರ

Posted By : LSB LSB
Source : IANS
ಚಂಡೀಗಢ: ಪಂಜಾಬ್ ಸರ್ಕಾರ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೋಮವಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 5 ರುಪಾಯಿ ಹಾಗೂ ಡೀಸೆಲ್​ ಬೆಲೆ ಲೀಟರ್ 1 ರು. ಇಳಿಕೆ ಮಾಡಿದೆ.

ಇಂದು ಪಂಜಾಬ್ ಹಣಕಾಸು ಸಚಿವ ಮನ್​ಪ್ರೀತ್​ ಸಿಂಗ್​ ಬಾದಲ್​ ಅವರು ತಮ್ಮ ಬಜೆಟ್​ ಮಂಡನೆ ವೇಳೆ ಈ ವಿಷಯ ತಿಳಿಸಿದ್ದಾರೆ.

ಪಂಜಾಬ್​ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ವ್ಯಾಟ್​ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್​ ಬೆಲೆ 5 ರುಪಾಯಿ ಹಾಗೂ ಡೀಸೆಲ್​ ಬೆಲೆ 1 ರುಪಾಯಿ ಇಳಿಕೆಯಾಗಲಿದೆ. ನೂತನ ದರ ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಬಾದಲ್ ಹೇಳಿದ್ದಾರೆ.

ಕಳೆದ ಐದು ದಿನಗಳಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ನಾಲ್ಕು ಮೆಟ್ರೋಪಾಲಿಟನ್​ ಸಿಟಿಗಳಲ್ಲಿ ಪೆಟ್ರೋಲ್​ ಬೆಲೆ 15-16 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್​ ಬೆಲೆ 13-14 ಪೈಸೆ ಏರಿಕೆಯಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp