ಅಯೋಧ್ಯೆ ವಿವಾದ: ಫೆಬ್ರವರಿ 26ರಂದು ಪಂಚ ಸದಸ್ಯರ ಪೀಠ ವಿಚಾರಣೆ

ಅಯೋಧ್ಯೆ ರಾಮಜನ್ಮಭೂಮಿ ಭೂ ವಿವಾದ ಪ್ರಕರಣವನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಫೆಬ್ರವರಿ 26ರಂದು ವಿಚಾರಣೆಗೆ ತೆಗೆದುಕೊಳ್ಳಲಿದೆ.
ಅಯೋಧ್ಯೆ ವಿವಾದ: ಫೆಬ್ರವರಿ 26ರಂದು ಪಂಚ ಸದಸ್ಯರ ಪೀಠ ವಿಚಾರಣೆ
ಅಯೋಧ್ಯೆ ವಿವಾದ: ಫೆಬ್ರವರಿ 26ರಂದು ಪಂಚ ಸದಸ್ಯರ ಪೀಠ ವಿಚಾರಣೆ
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಭೂ ವಿವಾದ ಪ್ರಕರಣವನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಫೆಬ್ರವರಿ 26ರಂದು ವಿಚಾರಣೆಗೆ ತೆಗೆದುಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ , ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಡಿ ವೈ ಚಂದ್ರಚೂಡ, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ರವನ್ನೊಳಗೊಂಡ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಅಯೋಧ್ಯೆ ವಿವಾದದ ವಿಚಾರಣೆ ನಡೆಸಲಿದೆ.
ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಗೊಗೋಯ್ ರಚಿಸಿದ್ದ ಐವರು ಸದಸ್ಯರ ಪೀಠದ ಓರ್ವ ಸದಸ್ಯ ಬೋಬ್ಡೆರಜೆ ಮೇಲೆ ತೆರಳಿದ್ದ ಕಾರಣ ಪ್ರಕರಣದ ವಿಚಾರಣೆ ವಿಳಂಬವಾಗಿತ್ತು. ಇದೀಗ ನ್ಯಾಯಾಧೀಶರು ರಜೆ ಮುಗಿಸಿ ಹಿಂತಿರುಗಿದ್ದು ಮುಂದಿನ   ವಿಚಾರಣೆ ದಿನಾಂಕ ನಿಗದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com