46 ಎಸಿಗಳ 7 ಸ್ಟಾರ್ ಬಂಗ್ಲೆಯಲ್ಲಿ ತೇಜಸ್ವಿಯದ್ದು ರಾಜವೈಭವ: ಸುಶೀಲ್‌ ಮೋದಿ

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ತಾವು ವಾಸಿಸುತ್ತಿದ್ದ ಐಷಾರಾಮಿ ಬಂಗಲೆಯನ್ನು ಸುಪ್ರೀಂ ಕೋರ್ಟ್ ಆದೇಶದನ್ವಯ ತೆರವುಗೊಳಿಸಿದ್ದಾರೆ....
ತೇಜಸ್ವಿ ಯಾದವ್ ವಾಸಿಸುತ್ತಿದ್ದ ಬಂಗಲೆ
ತೇಜಸ್ವಿ ಯಾದವ್ ವಾಸಿಸುತ್ತಿದ್ದ ಬಂಗಲೆ
ಪಾಟ್ನಾ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ತಾವು ವಾಸಿಸುತ್ತಿದ್ದ ಐಷಾರಾಮಿ ಬಂಗಲೆಯನ್ನು ಸುಪ್ರೀಂ ಕೋರ್ಟ್ ಆದೇಶದನ್ವಯ ತೆರವುಗೊಳಿಸಿದ್ದಾರೆ.
ಸದ್ಯ ಈ ಬಂಗಲೆಯನ್ನು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ಅವರಿಗೆ ನೀಡಲಾಗಿದೆ. ಪಂಚತಾರಾ ಹೊಟೇಲುಗಳನ್ನೂ ನಾಚಿಸುವ ರೀತಿಯ ಇಲ್ಲಿನ ವಿಲಾಸಿ ಸೌಕರ್ಯಗಳನ್ನು, ಅಲಂಕಾರಗಳನ್ನು ಕಂಡು ನಿಬ್ಬೆರಗಾಗಿದ್ದಾರೆ. 46 ಎಸಿಗಳ 7 ಸ್ಟಾರ್‌ ನ ಈ ಬಂಗ್ಲೆಯಲ್ಲಿ ತೇಜಸ್ವಿ ರಾಜ ವೈಭವ ನಡೆಸುತ್ತಿದ್ದರು ಎಂದು ಅವರು ಹೇಳಿದ್ದಾರೆ. 
'46 ಎಸಿ ಗಳು ಇರುವ ಈ ಭಾರೀ ಐಶಾರಾಮಿ ಬಂಗ್ಲೆ ಪಂಚ ತಾರಾ ಹೊಟೇಲುಗಳನ್ನು ಕೂಡ ನಾಚಿಸುವಂತಿದೆ. ಇದರ ನಿರ್ವಹಣೆಗೆ ತಗುಲುವ ವೆಚ್ಚವೇ ಒಂದು ಆನೆಯನ್ನು ಸಾಕುವ ವೆಚ್ಚವನ್ನು ಮೀರಿಸಲಿದೆ' ಎಂದು ಸುಶೀಲ್‌ ಮೋದಿ ಟ್ವೀಟ್‌ ಮಾಡಿದ್ದಾರೆ. 
ಈ ಬಂಗ್ಲೆಯನ್ನು ಪ್ರವೇಶಿಸಿದಾಗ ನಮಗೆ ಸೆವೆನ್‌ ಸ್ಟಾರ್‌ ಹೊಟೇಲ್‌ ಪ್ರವೇಶಿಸಿದ ಅನುಭವವಾಯಿತು. ಇಲ್ಲಿ ಎಲ್ಲವೂ ಸ್ಪೆಶಲ್‌, ಯಾವುದೂ ಆರ್ಡಿನರಿ ಇಲ್ಲ. ಈ ಬಂಗ್ಲೆಯ ವೈಭವೀಕರಣಕ್ಕೆ ಕೋಟಿ ಗಟ್ಟಲೆ ಖರ್ಚು ಮಾಡಲಾಗಿರುವುದು ಸ್ಪಷ್ಟವಿದೆ. ಇಷ್ಟೊಂದು ವೈಭವದ ವಿಲಾಸೀ ಬಂಗ್ಲೆಯಲ್ಲಿ ವಾಸಿಸುವ ತೇಜಸ್ವಿ ಯಾದವ್‌ ಗೆ ಬಡವರ ಮತ್ತು ಹಿಂದುಳಿದವರ ಕಷ್ಟ ಕಾರ್ಪಣ್ಯಗಳು ಹೇಗೆ ಗೊತ್ತಾಗಲು ಸಾಧ್ಯ ಎಂದು ಮೋದಿ ಪ್ರಶ್ನಿಸಿದ್ದಾರೆ. 
ಈ ಐಷಾರಾಮಿ ಬಂಗ್ಲೆ  ಬಿಹಾರ ರಾಜ್ಯಪಾಲ ಅಧಿಕೃತ ನಿವಾಸವಾಗಿರುವ ಪಟ್ನಾದಲ್ಲಿನ ರಾಜ ಭವನಕ್ಕಿಂತ ನೂರು ಪಟ್ಟು  ವೈಭವೋಪೇತವಾಗಿದೆ; ಈ ಬಂಗ್ಲೆಯನ್ನು ಮುಖ್ಯಮಂತ್ರಿಗಳು ಬಳಸಬಹುದಾಗಿದೆ; ನಾನಲ್ಲ' ಎಂದು ಸುಶೀಲ್‌ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com