ತೇಜಸ್ ಯುದ್ಧ ವಿಮಾನದಲ್ಲಿ ಜನರಲ್ ಬಿಪಿನ್ ರಾವತ್
ತೇಜಸ್ ಯುದ್ಧ ವಿಮಾನದಲ್ಲಿ ಜನರಲ್ ಬಿಪಿನ್ ರಾವತ್

ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್

ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ...
ಬೆಂಗಳೂರು:ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ಕಾರ್ಯಾಚರಣೆ ಆರಂಭಿಸಿರುವ ತೇಜಸ್ ಯುದ್ಧ ವಿಮಾನದಲ್ಲಿ ಗುರುವಾರ ಹಾರಾಟ ನಡೆಸಿದರು.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019 ಪ್ರದರ್ಶನದಲ್ಲಿ ಜನರಲ್ ಬಿಪಿನ್ ರಾವತ್ ಅವರ ನಂತರ ಸರ್ಕಾರದ ಪ್ರಧಾನ ಸಲಹೆಗಾರ ಪಿಎಸ್ ರಾಘವನ್ ಕೂಡ ಹಾರಾಟ ನಡೆಸಲಿದ್ದಾರೆ.
ಸಮರಕ್ಕೆ ಸನ್ನದ್ಧವಾಗಿರುವ ಭಾರತದ ಹಗುರ ಯುದ್ಧ ವಿಮಾನ ತೇಜಸ್ ಎಂಕೆ 1ಗೆ ಅಂತಿಮ ಕಾರ್ಯಾಚರಣೆಗೆ ನಿನ್ನೆಯಷ್ಟೇ ಅನುಮೋದನೆ ಸಿಕ್ಕಿ ಭಾರತೀಯ ವಾಯುಪಡೆಗೆ ಸೇರಿಸಲಾಗಿತ್ತು.
ನನ್ನ ಜೀವನದ ಅದ್ಭುತ ಅನುಭವ
ಇನ್ನು ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡಿಸಿದ ಬಳಿಕ ತಮ್ಮ ಅನುಭವ ಹಂಚಿಕೊಂಡ ಬಿಪಿನ್ ರಾವತ್ ಅವರು, ಇದು ನನ್ನ ಜೀವನದ ಅದ್ಭುತ ಅನುಭವಗಳಲ್ಲಿ ಒಂದು. ವಿಮಾನದಲ್ಲಿನ ಸೌಕರ್ಯಗಳು ಉತ್ತಮವಾಗಿದ್ದು, ಗುರಿಗಳ ಮೇಲಿನ ನಿಗಾ ವ್ಯವಸ್ಥೆ ಉತ್ತಮವಾಗಿದೆ. ನಿಜಕ್ಕೂ ಇದು ಅದ್ಬುತ ಯುದ್ಧ ವಿಮಾನವಿದು. ತೇಜಸ್ ಆವಿಷ್ಕರಣೆ ನಮ್ಮ ವಾಯು ಸೇನೆಯ  ಬಲ ಹೆಚ್ಚಿಸಿದೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com