ಪುಣೆ: ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದಿದ್ದ 6 ವರ್ಷದ ಬಾಲಕನ ರಕ್ಷಣೆ

ಇಲ್ಲಿನ ಮಂಚರ್ ತೆಹಸಿಲ್ ಬಳಿ 200 ಅಡಿ ಉದ್ದದ ಕೊಳವೆ ಬಾವಿಗೆ ಬಿದಿದ್ದ ಆರು ವರ್ಷದ ಬಾಲಕನನ್ನು ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.

Published: 21st February 2019 12:00 PM  |   Last Updated: 21st February 2019 12:03 PM   |  A+A-


RaviPanditBill

ಬಾಲಕ ರವಿ ಪಂಡಿತ್ ಬಿಲ್

Posted By : ABN ABN
Source : ANI
ಪುಣೆ: ಇಲ್ಲಿನ ಮಂಚರ್  ತೆಹಸಿಲ್ ಬಳಿ 200 ಅಡಿ ಉದ್ದದ  ಕೊಳವೆ ಬಾವಿಗೆ ಬಿದಿದ್ದ ಆರು ವರ್ಷದ ಬಾಲಕನನ್ನು ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.

ರವಿ ಪಂಡಿತ್ ಬಿಲ್ ಎನ್ನುವ ಬಾಲಕ ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ಕೊಳವೆ ಬಾವಿಗೆ ಬಿದಿದ್ದ  ಎಂದು ಅಂಬೆಗಾನ್ ಠಾಣೆ ಎಸ್ ಹೆಚ್ ಒ ಮಾಹಿತಿ ನೀಡಿದ್ದಾರೆ.

ಈತನ ಪೋಷಕರು ರಸ್ತೆ ನಿರ್ಮಾಣ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಆಟ ಆಡುತ್ತಿರುವುದಾಗಿ ಆಯಾತಪ್ಪಿ ಆತ ಬೋರ್ ವೆಲ್ ಕೆಳಗೆ ಬಿದಿದ್ದಾನೆ.

ಈ ಸುದ್ದಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸುವ ಮೂಲಕ ಬಾಲಕನನ್ನು ರಕ್ಷಿಸಿದಿದ್ದಾರೆ.

ಕಾರ್ಯಾಚರಣೆ ಕಠಿಣ ರೀತಿಯಿಂದ ಕೂಡಿತ್ತು. ಆ ಬಾಲಕನಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕೊಳವೆ ಬಾವಿಯಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp