ರಾಫೆಲ್ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು

ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಕೆಯಾದ ಪ್ರಕರಣ ಕುರಿತು ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.
ರಾಫೆಲ್ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು
ರಾಫೆಲ್ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು
ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಕೆಯಾದ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.
ಮುಖ್ಯ ನ್ಯಾಯಮೂರ್ತಿ  ರಂಜನ್ ಗೋಗಯ್ ತೀರ್ಪು ಮರುಪರಿಶೀಲನೆಗಾಗಿ ಅನೇಕ ಅರ್ಜಿಗಳು ಬಂದಿದು ಇದರ ಪರಿಶೀಲನೆಗಾಗಿ ಪ್ರತ್ಯೇಕ ಪೀಠಗಳನ್ನು ರಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಫೆಲ್ ಒಪ್ಪಂದ ಸಂಬಂಧ ಈ ಹಿಂದೆ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಪ್ ನೀಡಿತ್ತು.  ಆದರೆ ಆ ಬಳಿಕ ತೀರ್ಪು ಮರುಪರಿಶೀಲಿಸಬೇಕೆಂದು ಹಲವು ಮೂಲಗಳಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.
ರಾಫೆಲ್ ಒಪ್ಪಂದ ಕುರಿತು ಸಿಎಜಿ ವರದಿ ಪ್ರಸ್ತಾಪವನ್ನೂ ಸಹ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತ ತಿದ್ದುಪಡಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿ ಸೇರಿ ಒಟ್ಟಾರೆ ನಾಲ್ಕು ಅರ್ಜಿಗಳು ಸುಪ್ರೀಂ ಮುಂದಿದೆ. ಈಗ ಸುಪ್ರೀಂ ತನ್ನದೇ ತೀರ್ಪನ್ನು ಮರುಪರಿಶೀಲನೆ ಮಾಡಲು ಒಪ್ಪಿದ್ದು ಮುಂದೆ ಯಾವ ಬಗೆಯ ತೀರ್ಪು ಹೊರಬೀಳಲಿದೆ ಕಾದು ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com