ಫ್ಲೋರಿಡಾದಲ್ಲಿ ದರೋಡೆಕೋರರಿಂದ ತೆಲಂಗಾಣ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

ಅಮೆರಿಕದ ಫ್ಲೋರಿಡಾದಲ್ಲಿ ಮಂಗಳವಾರ ರಾತ್ರಿ ಕ್ವಿಕ್ ಫಿಲ್ ಗ್ಯಾಸ್ ಸ್ಟೇಷನ್ ದರೋಡೆಗೆ ಯತ್ನಿಸಿದ ದರೋಡೆಕೋರರು, ತೆಲಂಗಾಣ ಮೂಲದ...

Published: 21st February 2019 12:00 PM  |   Last Updated: 21st February 2019 01:09 AM   |  A+A-


Telangana man shot dead during robbery attempt in Florida, three arrested

ಸಾಂದರ್ಭಿಕ ಚಿತ್ರ

Posted By : LSB LSB
Source : The New Indian Express
ಹೈದರಾಬಾದ್​: ಅಮೆರಿಕದ ಫ್ಲೋರಿಡಾದಲ್ಲಿ ಮಂಗಳವಾರ ರಾತ್ರಿ ಕ್ವಿಕ್ ಫಿಲ್ ಗ್ಯಾಸ್ ಸ್ಟೇಷನ್ ದರೋಡೆಗೆ ಯತ್ನಿಸಿದ ದರೋಡೆಕೋರರು, ತೆಲಂಗಾಣ ಮೂಲದ ಸ್ಟೇಷನ್ ಕ್ಲರ್ಕ್ ಕೆ. ಗೋವರ್ಧನ್ ರೆಡ್ಡಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

​ಘಟನೆಯಲ್ಲಿ ಮತ್ತೊಬ್ಬರು ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಫ್ಲೋರಿಡಾ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಮೆರಿಕದಲ್ಲಿ ಕಳೆದ 7 ವರ್ಷಗಳಿಂದ ವಾಸವಿದ್ದ 40 ವರ್ಷದ ಗೋವರ್ಧನ್ ರೆಡ್ಡಿ ಅವರು ತೆಲಂಗಾಣದ ಯಾದಾದ್ರಿ ಭೋಂಗಿರ್ ಜಿಲ್ಲೆಯ ರಹೀಮ್ ಖಾನ್ ಪೇಟ್ ಗ್ರಾಮದವರು ಎನ್ನಲಾಗಿದೆ.

ಮೆರಿಕಾದಲ್ಲಿ ಈ ಘಟನೆ ನಡೆದಿರುವುದರಿಂದ ಗೋವರ್ಧನ್ ರೆಡ್ಡಿ ಅವರ ಮೃತದೇಹವನ್ನು ಭಾರತಕ್ಕೆ ತಂದು, ತಮಗೆ ಒಪ್ಪಿಸುವಂತೆ  ಅವರ ಕುಟುಂಬದವರು ಸರ್ಕಾರಕ್ಕೆ  ಮನವಿ ಮಾಡಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp