ಐಟಿ ಇಲಾಖೆ ಸಂಸದೀಯ ಸಮಿತಿ ಸಭೆಗೆ ಟ್ವಿಟ್ಟರ್ ಸಿಇಒ ಗೈರು

ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸಿ ಫೆಬ್ರವರಿ 25ರಂದು ನಿಗದಿಯಂತೆ ಸಂಸದೀಯ ಸಮಿತಿ ಮುಂದೆ ಹಾಜರಾಗುವುದಿಲ್ಲ,
ಜ್ಯಾಕ್ ಡಾರ್ಸಿ
ಜ್ಯಾಕ್ ಡಾರ್ಸಿ
ನವದೆಹಲಿ: ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸಿ ಫೆಬ್ರವರಿ 25ರಂದು ನಿಗದಿಯಂತೆ ಸಂಸದೀಯ ಸಮಿತಿ ಮುಂದೆ ಹಾಜರಾಗುವುದಿಲ್ಲ, ಬದಲಿಗೆ ಸಂಸ್ಥೆಯ ಸಾರ್ವಜನಿಕ ನೀತಿ ನಿರೂಪಣೆ ವಿಭಾಗದ ಮುಖ್ಯಸ್ಥ ಕಾಲಿನ್ ಕ್ರೌಲ್ ಅವರನ್ನು ಕಳಿಸುತ್ತಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆ ರಚಿಸಿದ ಸಂಸದೀಯ ಸಮಿತಿ ಟ್ವಿಟ್ಟರ್ ಸಿಇಒ ಅವರಿಗೆ ಫೆ.25ರಂದು ಸಮಿತಿ ಮುಂದೆ ಹಾಜರಾಗುವಂತೆ ಆಹ್ವಾನಿಸಿತ್ತು.ಅಲ್ಲದೆ ಈ ಹಿಂದೆ ಫೆ.11`ರಂದು ನಡೆದಿದ್ದ ಸಭೆಯಲ್ಲಿ ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟ್ಟರ್ ಸಂಸ್ಥೆಯ ಕಿರಿಯ ಅಧಿಕಾರಿಗಳೊಡನೆ ಭೇಟಿಯಾಗಲು ನಿರಾಕರಿಸಿತ್ತು.
ನಾಗರಿಕರ ಗೌಪ್ಯ ಮಾಹಿತಿ ಸಂರಕ್ಷಣೆ, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾದ್ಯಮಗಳ ಪ್ರಭಾವದ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಮಿತಿ ಸಭೆಯನ್ನು ಕರೆಯಲಾಗಿದೆ.
ಇದೀಗ ಟ್ವಿಟ್ಟರ್ ಹೊರಡಿಸಿದ ಪ್ರಕಟಣೆಯಲ್ಲಿ ಸಂಸ್ಥೆಗೆ ಸಂಸದೀಯ ಸನಿತಿ ನಿಡಿದ ಆಹ್ವಾನಕ್ಕೆ ಧನ್ಯವಾದ ಹೇಳಿದ್ದಲ್ಲದೆ ಸಂಸ್ಥೆಯ ಸಾರ್ವಜನಿಕ ನೀತಿ ನ್ರೂಪಣೆ ವಿಭಾಗದ ಮುಖ್ಯಸ್ಥ ಕ್ರೌಲ್ ಅವರನ್ನು ಸಮಿತಿ ಸಭೆಗೆ ಕಳುಹಿಸುತ್ತಿರುವುದಾಗಿ ಸಂಸ್ಥೆ ಸ್ಪಷ್ಟನೆ ನಿಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com