ಕಣ್ಣು ಬಿಟ್ಟರೆ ದೆಹಲಿಯಲ್ಲಿ ಸಾವಿರ ಸಮಸ್ಯೆ ಕಾಣುತ್ತವೆ: ಸಿಎಂ ಕೇಜ್ರಿವಾಲ್ ಧರಣಿಗೆ ಗಂಭೀರ್ ಟಾಂಗ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಿಯಾಗಿ ಕಣ್ಣು ಹಾರಿಸಿದರೆ ಕನಿಷ್ಠ ಸಾವಿರ ಸಮಸ್ಯೆ ಕಾಣುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸರ್ಕಾರ ಇಂದು ಬೀದಿಗಿಳಿದಿದೆ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಿಯಾಗಿ ಕಣ್ಣು ಹಾರಿಸಿದರೆ ಕನಿಷ್ಠ ಸಾವಿರ ಸಮಸ್ಯೆ ಕಾಣುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸರ್ಕಾರ ಇಂದು ಬೀದಿಗಿಳಿದಿದೆ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ದೆಹಲಿಗೆ ಸಂಪೂರ್ಣ ರಾಜ್ಯ ನೀಡಬೇಕು ಎಂದು ಆಗ್ರಹಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವಂತೆಯೇ, ತಮ್ಮದೇ ರಾಜ್ಯದ ಸಿಎಂ ವಿರುದ್ಧ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್, ದೆಹಲಿಯಲ್ಲಿ 2 ಕೋಟಿ ಜನಸಂಖ್ಯೆ, ಸಾವಿರಾರು ಸಮಸ್ಯೆಗಳಿವೆ. ಆದರೆ ಪರಿಹಾರವೇನು.. ಮತ್ತೋರ್ವ ಸಿಎಂ ಕೇಜ್ರಿವಾಲ್ ಧರಣಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಹೇಳಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಮಾರ್ಚ್ 1 ರಿಂದ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com