ಪುಲ್ವಾಮ ದಾಳಿ ತನಿಖೆ: ಉಗ್ರರು ಆತ್ಮಾಹುತಿಗೆ ಬಳಸಿದ್ದು ರೆಡ್ ಮಾರುತಿ ಕಾರು

ರಾಷ್ಟ್ರೀಯ ತನಿಖಾ ಸಂಸ್ಥೆ(ಎಎನ್ಐ) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯ ತನಿಖೆಯನ್ನು ಚುರುಕುಗೊಳಿಸಿದ್ದು, ಉಗ್ರರು ಆತ್ಮಾಹುತಿ....
ದಾಳಿ ನಡೆದ ಸ್ಥಳ
ದಾಳಿ ನಡೆದ ಸ್ಥಳ
ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ(ಎಎನ್ಐ) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯ ತನಿಖೆಯನ್ನು ಚುರುಕುಗೊಳಿಸಿದ್ದು, ಉಗ್ರರು ಆತ್ಮಾಹುತಿ ದಾಳಿಗೆ ಬಳಿಸಿದ ಕಾರಿನ ವಿವರ ಲಭ್ಯವಾಗಿದೆ.
ವರದಿಗಳ ಪ್ರಕಾರ, ತನಿಖಾ ಅಧಿಕಾರಿಗಳು ಸ್ಫೋಟ ಸ್ಥಳದಲ್ಲಿ ಸಂಗ್ರಹಿಸಿದ ಸ್ಯಾಂಪಲ್ ಪೀಸ್ ಗಳನ್ನು ಪರಿಶೀಲಿಸಿದ ಮಾರುತಿ ಸಂಸ್ಥೆಯ ಅಧಿಕಾರಿಗಳು, ಉಗ್ರರು ಆತ್ಮಾಹುತಿ ದಾಳಿಗೆ ಬಳಸಿದ್ದು ರೆಡ್ ಮಾರುತಿ ಇಕೋ ಕಾರು ಎಂದು ಗುರುತಿಸಿದ್ದಾರೆ. ಅಲ್ಲದೆ ಈ ಕಾರು 2010-11ರಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದ್ದು, ಅದಕ್ಕೆ ಮರು ಪೇಂಟ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಉಗ್ರರು ದಾಳಿಗೆ ಬಳಸಿದ್ದು ರೆಡ್ ಕಾರು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಸಹ ಹೇಳಿದ್ದಾರೆ.
ಕಳೆದ ಫೆಬ್ರವರಿ 14ರಂದು ಜೈಶ್ ಇ-ಮೊಹಮ್ಮದ ಉಗ್ರ ಸಂಘಟನೆಯ ಅದಿಲ್ ಅಹ್ಮದ್ ದಾರ್ ರೆಡ್ ಮಾರುತಿ ಕಾರನ್ನು ಸಿಆರ್ ಪಿಎಫ್ ಬಸ್ ಗೆ ಡಿಕ್ಕಿ ಹೊಡೆಸಿ ಸ್ಫೋಟಿಸಿಕೊಂಡಿದ್ದನು. ಪರಿಣಾಮ ಸಿಆರ್ ಪಿಎಫ್ ನ 40 ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com