ಮೆದುಳು ನಿಷ್ಕ್ರಿಯ: ಇಬ್ಬರ ಅಂಗದಾನ 12 ಜನರ ಬಾಳಿಗೆ ಹೊಸ ಬೆಳಕು!

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗದಾನದಿಂದಾಗಿ 12 ಜನರ ಬಾಳಿಗೆ ಹೊಸ ಬೆಳಕು ಮೂಡಿದೆ.

Published: 23rd February 2019 12:00 PM  |   Last Updated: 23rd February 2019 01:40 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಂಗಳೂರು/ಕೊಯಮತ್ತೂರ್: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗದಾನದಿಂದಾಗಿ 12 ಜನರ ಬಾಳಿಗೆ ಹೊಸ ಬೆಳಕು ಮೂಡಿದೆ.

ಮಂಡ್ಯದ ಜಿಲ್ಲೆಯ ನೆಲಮಂಗಲ ತಾಲೂಕಿನ ನಿವಾಸಿ 39 ರಾಜು ಎಂಬುವರಿಗೆ ಫೆ.19ರ ರಾತ್ರಿ ಅಪಘಾತವಾಗಿತ್ತು. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರನೇ ದಿನ ಯಶವಂತಪುರದ ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಮಗನ ಅಂಗದಾನಕ್ಕೆ ಮುಂದಾಗಿದ್ದಾರೆ. ಇದರಿಂದ 6 ಮಂದಿ ಜೀವನದಲ್ಲಿ ಹೊಸ ಬೆಳಕು ಮೂಡಿಸಿದೆ.

ಇಲ್ಲಿನ ಕೋವೈ ವೈದ್ಯಕೀಯ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವ ಈರೋಡ್ ಜಿಲ್ಲೆಯ ಉಸಿಪಾಳ್ಯನ್ ಗ್ರಾಮದ ರೈತ ಕೆ.ಷಣ್ಮುಗಂ (55) ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಸೋಮವಾರ ರಾತ್ರಿ 10.45ಕ್ಕೆ ಅರಚಲೂರ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರಿಗೆ ಈರೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಷಣ್ಮುಗಂ ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಪತ್ನಿ ಹಾಗೂ ಮಗ, ಷಣ್ಮುಗಂ ಅವರ ಅಂಗಾಂಗಗಳನ್ನು ದಾನ ಮಾಡಲು ಉದಾರವಾಗಿ ಮುಂದೆ ಬಂದಿದ್ದು, ವೈದ್ಯರ ತಂಡ ನಿನ್ನೆ ಬೆಳಗ್ಗೆ ಷಣ್ಮುಗಂ ಅವರ ಯಕೃತ್ತು, ಕಿಡ್ನಿ, ಕಣ್ಣು, ಎಲುಬು ಹಾಗೂ ಚರ್ಮ ತೆಗೆದುಕೊಂಡಿದೆ. ಲಿವರ್ ಹಾಗೂ ಕಿಡ್ನಿಯನ್ನು ಕೆಎಂಸಿಎಚ್ ಆಸ್ಪತ್ರೆಯಲ್ಲಿ ಬೇರೊಬ್ಬರಿಗೆ ಕಸಿ ಮಾಡಲಾಗಿದ್ದು, ಕಣ್ಣು, ಚರ್ಮ ಹಾಗೂ ಎಲುಬುಗಳನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಷಣ್ಮುಗಂ ತಮ್ಮ ಅಂಗಾಂಗಗಳನ್ನು ಬೇರೆಯರಿಗೆ ದಾನ ಮಾಡಿ ಆರು ಜನರಿಗೆ ಜೀವನ ನೀಡಿದ ಮಹತ್ಕಾರ್ಯಕ್ಕೆ ಅವರ ಕುಟುಂಬದವರು ಹೆಮ್ಮೆ ಪಟ್ಟಿದ್ದಾರೆ.

ಕುಟುಂಬದವರ ಸಮಯೋಚಿತ ಹಾಗೂ ಉದಾರ ನಿರ್ಧಾರಕ್ಕೆ ಕೆಎಂಸಿಎಚ್ ಆಸ್ಪತ್ರೆಯ ಅಧ‍್ಯಕ್ಷ ಡಾ.ನಲ್ಲಾ ಜಿ ಪಳನಿಸ್ವಾಮಿ ಅವರು ಧನ್ಯವಾದ ಸೂಚಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp