ಮೋದಿ ಪೌರ ಕಾರ್ಮಿಕರ ಕಾಲುತೊಳೆಯುವುದರಿಂದ ಅವರ ಹೊಟ್ಟೆ ತುಂಬಲ್ಲ: ಶಿವಸೇನೆ

ಕುಂಭಮೇಳದಲ್ಲಿ ಐವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯದ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಮೆಚ್ಚುಗೆ....

Published: 26th February 2019 12:00 PM  |   Last Updated: 26th February 2019 04:06 AM   |  A+A-


Question for sanitation workers is of 'stomach', not feet: Shiv Sena

ಪೌರ ಕಾರ್ಮಿಕರ ಪಾದಪೂಜೆ ಮಾಡುತ್ತಿರುವ ನರೇಂದ್ರ ಮೋದಿ

Posted By : LSB LSB
Source : PTI
ಮುಂಬೈ: ಕುಂಭಮೇಳದಲ್ಲಿ ಐವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯದ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಕಾಲು ತೊಳೆಯುವುದರಿಂದ ಪೌರ ಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ ಎಂದು ಕಿಡಿಕಾರಿದೆ.

ಎರಡು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ಸ್ವಚ್ಥತೆಗೆ ಕಾರಣರಾದ ಪೌರ ಕಾರ್ಮಿಕರ ಪಾದಪೂಜೆ ಮಾಡಿದ್ದರು. 

ಪೌರ ಕಾರ್ಮಿಕರ ಕಾಲು ತೊಳೆದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇವೆ. ಆದರೆ ಅವರಿಗೆ ಕಾಲುಗಳ ಬಗ್ಗೆ ಚಿಂತೆ ಇಲ್ಲ. ಅವರ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ ಇದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿದೆ.

ಪೌರ ಕಾರ್ಮಿಕರು ತಮ್ಮ ಕಾಲ ಮೇಲೆ ತಾವು ನಿಂತುಕೊಂಡಾಗ ಮಾತ್ರ ಪ್ರಧಾನಿ ಮೋದಿಯ ಪಾದಪೂಜೆಯ ಫಲ ನೀಡಿದಂತಾಗುತ್ತದೆ ಎಂದು ಶಿವಸೇನೆ ಹೇಳಿದೆ.

ಇದೇ ವೇಳೆ ರೈತರಿಗೆ ನಗದು ನೀಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಟೀಕಿಸಿದ ಶಿವಸೇನೆ, ಇದೊಂದು ಚುನಾವಣಾ ಗಿಮಿಕ್ ಅಷ್ಟೆ. ಅಧಿಕಾರದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಬಜೆಟ್ ಇದನ್ನೇ ಮಾಡುತ್ತವೆ ಎಂದು ಹೇಳಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp