ಐಎಫ್ ಪೈಲಟ್ ಅಭಿನಂದನ್ ರನ್ನು ತಕ್ಷಣ ಸುರಕ್ಷಿತವಾಗಿ ಬಿಡುಗಡೆಮಾಡಿ: ಪಾಕ್ ಗೆ ಭಾರತ ಒತ್ತಾಯ

ಪಾಕಿಸ್ತಾನ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ.
ಐಎಫ್ ಪೈಲಟ್ ಅಭಿನಂದನ್ ರನ್ನು ತಕ್ಷಣ ಸುರಕ್ಷಿತವಾಗಿ ಬಿಡುಗಡೆಮಾಡಿ: ಪಾಕ್ ಗೆ ಭಾರತ ಒತ್ತಾಯ
ಐಎಫ್ ಪೈಲಟ್ ಅಭಿನಂದನ್ ರನ್ನು ತಕ್ಷಣ ಸುರಕ್ಷಿತವಾಗಿ ಬಿಡುಗಡೆಮಾಡಿ: ಪಾಕ್ ಗೆ ಭಾರತ ಒತ್ತಾಯ
ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ.
"ಭಾರತೀಯ ವಾಯುಪಡೆಯ ಗಾಯಗೊಂಡ ಪೈಲಟ್ ಅನ್ನು ಅಸಭ್ಯ ರೀತಿಯಲ್ಲಿ ನಡೆಸಿಕೊಳ್ಳಬೇಡಿ" ಎಂದು ಪಾಕ್ ಗೆ ಭಾರತ ಎಚ್ಚರಿಸಿದೆ. ಅಲ್ಲದೆ ಪಾಕ್ ತಮ್ಮ ಪೈಲಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಹೇಳಿದೆ.
ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ  ಅವರಿಗೆ ಭಾರತ ವಿದೇಶಾಂಗ ಸಚಿವಾಲಯವು ಸಮನ್ಸ್ ನೀಡಿದ್ದು,  ಭಾರತೀಯ ವಾಯುಪಡೆಯ ಪೈಲಟ್ ನೊಡನೆ "ಅಸಭ್ಯ ವರ್ತನೆ" ತೋರುವ ಮೂಲಕ ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಜಿನೀವಾ ಒಪ್ಪಂದದ ನಿಯಮವನ್ನು ಉಲ್ಲಂಘಿಸಿದೆ ಎಂದು ಬಾರತ ಹೇಳಿದೆ.
ಭಾರತದ ಪೈಲಟ್ ಗೆ ಯಾವ ಹಾನಿಯಾಗುವುದಿಲ್ಲ, ಅವರು ಸುರಕ್ಷಿತವಾಗಿ ಹಿಂತಿರುಗುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಪಾಕ್ ಗೆ ಸೂಚನೆ ನೀಡಿದೆ.
ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ತಮ್ಮ ರಾಯಭಾರಿಗಳಿಗೆ ಕದನ ವಿರಾಮ ಉಲ್ಲಂಘನೆ ಕುರಿತು ವಿವರಿಸಿದೆ. ಪಾಕಿಸ್ತಾನದಲ್ಲಿನ ಭಾರತ ಹೈಕಮಿಷನರ್  ಗೌರವ್ ಅಹ್ಲುವಾಲಿಯಾ ಅವರಿಗೆ ಸಮನ್ಸ್ ನೀಡಿದ್ದು ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ಆರೋಪಿಸಿದೆ.
ದಕ್ಷಿಣ ಏಷ್ಯಾ ಮತ್ತು ಸಾರ್ಕ್ ಡೈರಕ್ಟರ್ ಜನರಲ್ ಆಗಿರುವ  ಡಾ. ಮೊಹಮ್ಮದ್ ಫೈಸಲ್ ಭಾರತೀಯ ರಾಜತಾಂತ್ರಿಕರಿಗೆ  ಸಮನ್ಸ್  ನೀಡಿ  "2003 ರ ಕದನ ವಿರಾಮ ನಿಯಮವನ್ನು ಗೌರವಿಸಿ, ಭಾರತದ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ  ಶಾಂತಿಯನ್ನು ಕಾಪಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ. ನೀಡಿದ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com