ವೈಮಾನಿಕ ದಾಳಿ ನಂತರ ಭಾರತವನ್ನು ಕುಖ್ಯಾತಗೊಳಿಸಲು ಪಾಕ್‌ ಯತ್ನ: ರಾಜನಾಥ್‌ ಸಿಂಗ್‌

ಭಾರತೀಯ ವಾಯು ಪಡೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಭಾರತವನ್ನು ಕುಖ್ಯಾತಗೊಳಿಸಲು....

Published: 27th February 2019 12:00 PM  |   Last Updated: 27th February 2019 08:45 AM   |  A+A-


Pak trying to defame India after IAF air strikes: Rajnath

ರಾಜನಾಥ್ ಸಿಂಗ್

Posted By : LSB LSB
Source : Online Desk
ಬಿಲಾಸ್ಪುರ್: ಭಾರತೀಯ ವಾಯು ಪಡೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಭಾರತವನ್ನು ಕುಖ್ಯಾತಗೊಳಿಸಲು ಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಬುಧವಾರ ಹೇಳಿದ್ದಾರೆ.

ಇಂದು ಛತ್ತೀಸ್ ಗಢದ ಬಿಲಾಸ್ಪುರ್ ದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆ ಉಗ್ರ ಶಿಬಿರಗಳನ್ನು ಬಹಳ ಎಚ್ಚರಿಕೆಯಿಂದ, ಯಾವುದೇ ನಾಗರಿಕರ ಜೀವ ಹಾನಿಗೆ ಆಸ್ಪದ ನೀಡದೆ ನಡೆಸಿದೆ. ಆದರೂ ಪಾಕ್, ಭಾರತವನ್ನು ಕುಖ್ಯಾತಗೊಳಿಸಿಲು ಯತ್ನಿಸುತ್ತಿದೆ ಎಂದರುಯ

ಪಾಕಿಸ್ತಾನಕ್ಕೆ ಭಾರತ ಅತ್ಯಂತ ಪರಿಣಾಮಕಾರಿ ಹಾಗೂ ತಕ್ಕುದಾದ ಉತ್ತರವನ್ನು ನೀಡಿದೆ ಎಂದ ಸಿಂಗ್‌, ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿರುವುದಲ್ಲದೆ ಅದನ್ನು ವಿಶ್ವದ ಯಾವುದೇ ಶಕ್ತಿ ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.

ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಎರಡು ದಿನಗಳ ಹಿಂದೆ ಅತ್ಯಂತ ಪ್ರಬಲ ಉತ್ತರ ನೀಡಿದ್ದೇವೆ ಎಂದರು.
Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp