ಶತ್ರುಗಳ ಆಟ ನಡೆಯಲ್ಲ, ಒಗ್ಗಟ್ಟಿನಿಂದ ಹೋರಾಡುತ್ತೇವೆ, ಒಗ್ಗಟ್ಟಿನಿಂದ ಗೆಲ್ಲುತ್ತೇವೆ: ಪ್ರಧಾನಿ ಮೋದಿ
ಶತ್ರುಗಳ ಆಟ ನಡೆಯಲ್ಲ, ಒಗ್ಗಟ್ಟಿನಿಂದ ಹೋರಾಡುತ್ತೇವೆ, ಒಗ್ಗಟ್ಟಿನಿಂದ ಗೆಲ್ಲುತ್ತೇವೆ: ಪ್ರಧಾನಿ ಮೋದಿ

ಶತ್ರುಗಳಿಂದ ನಮಗೆ ಅಡ್ಡಿ, ಆದರೆ ಒಗ್ಗಟ್ಟಿನಿಂದ ಹೋರಾಡುತ್ತೇವೆ, ಒಗ್ಗಟ್ಟಿನಿಂದ ಗೆಲ್ಲುತ್ತೇವೆ: ಪ್ರಧಾನಿ ಮೋದಿ

ಶತ್ರುಗಳ ಆಟ ನಡೆಯುವುದಿಲ್ಲ, ಭಾರತ ಒಗ್ಗಟ್ಟಿನಿಂದ ಹೋರಾಡುತ್ತದೆ, ಒಗ್ಗಟ್ಟಿನಿಂದ ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಶತ್ರುಗಳ ಆಟ ನಡೆಯುವುದಿಲ್ಲ, ಭಾರತ ಒಗ್ಗಟ್ಟಿನಿಂದ ಹೋರಾಡುತ್ತದೆ, ಒಗ್ಗಟ್ಟಿನಿಂದ ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಫೆ.28 ರಂದು ಲಕ್ಷಾಂತರ ಬಿಜೆಪಿಯ ಕಾರ್ಯಕರ್ತರನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನಾವು ಒಗ್ಗಟ್ಟಿನಿಂದ ಯೋಧರ ಜೊತೆ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ. 
ಶತ್ರುಗಳು ಭಯೋತ್ಪಾದಕರನ್ನು ಬೆಂಬಲಿಸಿ ನಮ್ಮ ದೇಶದ ವಿರುದ್ಧ ಕಾರ್ಯಾಚರಣೆ ನಡೆಸಿದರೆ, ಅದು ನಮ್ಮ ಅಭಿವೃದ್ಧಿಯನ್ನು ತಡೆಯುವುದಕ್ಕಾಗಿ ಆಗಿರುತ್ತದೆ. ಆದರೆ ನಾವು ಒಗ್ಗಟ್ಟಿನಿಂದ ನಿಲ್ಲಬೇಕಿದೆ, ನಮ್ಮ ಯೋಧರ ಜೊತೆ ನಿಲ್ಲಬೇಕಿದೆ. ನಾವು ಬಲಿಷ್ಟವಾಗಿದ್ದೇವೆ ಎಂಬ ಸಂದೇಶ ರವಾನೆ ಮಾಡಬೇಕಿದೆ, ಎಷ್ಟೇ ಅಡೆತಡೆಗಳು ಬಂದರೂ ನಮ್ಮ ಅಭಿವೃದ್ಧಿಯನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ ಎಂದು ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ನಮ್ಮ ಸಮಷ್ಟಿಯ ಮನೋಬಲವನ್ನು ಇಡಿ ವಿಶ್ವವೇ ನೋಡುತ್ತಿದೆ. ನಮ್ಮ ಸೇನೆಯ ಸಾಮರ್ಥ್ಯದ ಬಗ್ಗೆ ನಮಗೆ ಭರವಸೆ ಇದೆ, ಯೋಧರ ನೈತಿಕತೆಯನ್ನು ಕುಗ್ಗಿಸುವ ಅವರು ನಮ್ಮತ್ತ  ಬೆರಳು ಮಾಡಿ ತೋರುವ ಯಾವುದೇ ಅಂಶಗಳಿಗೂ ನಾವು ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com